ಕರ್ನಾಟಕ

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೊಡ್ಡಗೌಡರು ಗುಡುಗು

ಡಿ.ಕೆ. ಶಿವಕುಮಾರ್ ರಾಜ್ಯದ ಹಣವನ್ನ ನುಂಗಬೇಕು ಅಂತಿದ್ದಾರೆ, ಇಂಥವರಿಗೆ ಬುದ್ಧಿ ಕಲಿಸಬೇಕು ಎಂದು ಗುಡುಗಿದ್ದಾರೆ.

ಚನ್ನಪಟ್ಟಣ : ಉಪ ಚುನಾವಣಾ ಅಖಾಡ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಅಬ್ಬರಿಸಿದ್ದಾರೆ.. ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಎಚ್‌ಡಿಡಿ, ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಹಣವನ್ನ ನುಂಗಬೇಕು ಅಂತಿದ್ದಾರೆ, ಇಂಥವರಿಗೆ ಬುದ್ಧಿ ಕಲಿಸಬೇಕು, ವಾಲ್ಮೀಕಿ ಹಗರಣದಲ್ಲಿ ಬಡಜನರ ಹಣ ಲೂಟಿ ಮಾಡಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತೆಗೆಯುವವರೆಗೆ ಹೋರಾಟ ಮಾಡ್ತೇವೆ ಅಂತಾ ಅಬ್ಬರಿಸಿದ್ದಾರೆ.. ನಿವೇಶನದ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಹಗರಣ ನಡೆಸಿದ್ದಾರೆ ಅಂತಾ ಆರೋಪಿಸಿದ್ದಾರೆ.. ನನ್ನ ಮೊಮ್ಮಗ ಅಸೆಂಬ್ಲಿ ಎಂಟ್ರಿ ಆಗೋದು 100 % ಸತ್ಯ.. ಕೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಬಂದಿಲ್ಲ, ಪ್ರಚಾರದ ಆ ನೆಪದಲ್ಲಿ ನಿಮ್ಮನ್ನ ನೋಡುವ ಪುಣ್ಯ ಇದೇ ಅಲ್ವಾ ಅದು ಮುಖ್ಯ ಎಂದಿದ್ದಾರೆ..