ಸಕ್ಕರೆನಾಡು ಮಂಡ್ಯದಲ್ಲಿ ಡೆವಲಪ್‌ಮೆಂಟ್ ಪಾಲಿಟಿಕ್ಸ್ ಶುರುವಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಸಡ್ಡು ಹೊಡೆಯೋಕೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಲಯದ ಅಡಿಯಲ್ಲಿ=6 ಕೋಟಿ ವೆಚ್ಚದಲ್ಲಿ ಹತ್ತು ಕಿಲೋಮೀಟರ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಕಿಕ್ಕೇರಿಯಿಂದ ಕೆ.ಆರ್.ಪೇಟೆ ವರೆಗಿನ ಹೆದ್ದಾರಿ ಕಾಮಗಾರಿಯಾಗಲಿದೆ.
ಎರಡ್ಮೂರು ವರ್ಷಗಳಿಂದ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದ ಹೆದ್ದಾರಿ ಅಭಿವೃದ್ಧಿಗೆ ಸಾಕಷ್ಟು ಮನವಿ ಮಾಡಿದ್ದರು. ಇತ್ತೀಚೆಗೆ ಬಹಿರಂಗ ವೇದಿಕೆಯಲ್ಲೇ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಹೆಚ್.ಡಿ.ಮಂಜು ಖುದ್ದು ಸಿಎಂಗೆ ಮನವಿ ಕೊಟ್ಟು ಒತ್ತಾಯಿಸಿದ್ದರು. ಆದರೂ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ್ದ ಸರ್ಕಾರಕ್ಕೆ, ಇದೀ ಹೆಚ್‌ಡಿಕೆ ಅವರೇ ಟಕ್ಕರ್ ಕೊಟ್ಟಿದ್ದಾರೆ.