ಚನ್ನಪಟ್ಟಣ ಉಪಚುನಾವಣೆ ಅಖಾಡ ರಂಗೇರಿದೆ. ಮತದಾರರಿಗೆ ಸೀರೆ ಹಂಚಿರುವ ವಿಚಾರದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸೀರೆ ಪಂಚೇ ಹಂಚಿರೋದಕ್ಕು ನಮ್ಮ ಪಕ್ಷಕ್ಕೂ ಸಂಭಂದವಿಲ್ಲ ಎಂದಿದ್ದಾರೆ. ಸೀರೆ ಹಂಚುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ನವರು ಎಂದು ಹೇಳಿದ್ದಾರೆ.
ಕಳೆದ ಬಾರಿ ಯೋಗಿಶ್ವರ್ ಹಂಚಿದ್ದು, ಕಾಂಗ್ರೆಸ್ ಕಾರ್ಡ್ ಗಳನ್ನ ನೀಡಿದ್ದು ನೋಡಿಲ್ವಾ..ಈಗಲೂ ಕಾಂಗ್ರೆಸ್ ನವರು ನಕಲಿ ಆಫರ್ ಕಾರ್ಡ್ ಹಂಚುವ ಪ್ರಯೋಗ ಮಾಡುತಿದ್ದಾರೆ. ಹೊಸದೊಡ್ಡಿ ಬಳಿ ಸಿರೆ, ಶರ್ಟ್ ಗಳು ಸೀಜ್ ಆಗಿದ್ದು ನಮಗೆ ಸಂಬಂಧಿಸಿದಲ್ಲ. ನಿಖಿಲ್ ಮದುವೆ ಸಂದರ್ಭದಲ್ಲಿ ಉಡುಗೊರೆ ನೀಡಬೇಕಿತ್ತು. ಕೊರೊನಾ ಕಾರಣದಿಂದ ಕೊಡಲು ಸಾಧ್ಯವಾಗಿರಲಿಲ್ಲ. ನಿಖಿಲ್ ಆರ್ಡರ್ ಮಾಡಿದ್ದೆಲ್ಲಾ ಮಾರ್ಕೆಟ್ ಗೆ ವಾಪಸ್ ಮಾಡಲಾಗಿದೆ. ಆಗಲೇ ಮಾರಟನೂ ಮಾಡಿ ಆಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಾನು ಚುನಾವಣೆ ಮಾಡಿರೊದು.