ಕರ್ನಾಟಕ

50 ಕೋಟಿ ಚುನಾವಣೆಗೆ ಕೇಳಿದ್ರು ಅಂತಾ ಕೇಸ್ ಹಾಕಿದ್ರು- CM ವಿರುದ್ಧ HDD ಕಿಡಿ..!

ಸೋಮಣ್ಣಗೆ ಯಾವಾಗ ಜ್ಯೋತಿಷಿ ಹೇಳಿದ್ರೋ ಗೊತ್ತಿಲ್ಲ. ಜನವರಿ ಒಳಗೆ ಈ ಸರ್ಕಾರ ಹೋಗುತ್ತೆ ಅಂತ ಹೇಳಿದ್ದಾರೆ. ನನಗೆ ಭವಿಷ್ಯ ಕೇಳೋ ಅಭ್ಯಾಸ ಇದೆ. ಸೋಮಣ್ಣ ಅವ್ರಿಗೆ ಯಾವಾಗ ಬಂತೊ ಗೊತ್ತಿಲ್ಲ. ಭಾಷಣದ ವೇಳೆ ದೇವೇಗೌಡರು ನಗೆ ಚಟಾಕಿ ಹಾರಿಸಿದ್ದಾರೆ. ಮಗನನ್ನ ಚುನಾವಣೆಗೆ ನಿಲ್ಲಿಸಿದ್ದಕ್ಕೆ ಕುಮಾರಸ್ವಾಮಿ ಅಪರಾಧಿ ಆದ್ರು ಎಂದರು.

ರಾಮನಗರ :  ಯಡಿಯೂರಪ್ಪ ಬಗ್ಗೆ ಹೊಗಳಿ ಸಾಧಿಸಬೇಕಾಗಿರೋದು ಏನು ಇಲ್ಲ. ಅವ್ರಿಗೂ ನನಗೂ ಪೈಪೋಟಿ ಇದ್ದು, ನಾನು ಪಾದಯಾತ್ರೆ ಮಾಡಿದ್ರೆ ಅವ್ರಿಗಿಂತ ಕಮ್ಮಿ ಏನು ಅಂತಾ ಅವ್ರು ಪಾದಯಾತ್ರೆ ಮಾಡಿದ ಮಹಾನುಭಾವ ಅವರು.
ಅಂತವ್ರು ನನ್ನ ಮೊಮ್ಮಗನಿಗೆ ಆಶೀರ್ವಾದ ಮಾಡಿದ್ದಾರೆ. ದೇವೇಗೌಡರ ಕುಟುಂಬದ ಬಳಿ ಮೂರು ತಿಂಗಳು ಸತತವಾಗಿ ಮಾಧ್ಯಮದ ಸ್ನೇಹಿತರು ಇದ್ರು. ದೇವೇಗೌಡರ ಕುಟುಂಬ ಮುಗಿಸಲು ಹಾಸನದಲ್ಲಿ ನಡೆದ ಒಂದು ಪ್ರಕರಣ ಇಟ್ಕೊಂಡ್ರು. ಅದಕ್ಕೆ ಎದೆ ಚಾಚಿ ವಿಧಾನಸಭೆಯಲ್ಲಿ ಅಶೋಕ್ ಕೆಲಸ ಮಾಡಿದ್ದರು ಎಂದರು.

HD Deve Gowda- 92 ಹೆಚ್.ಡಿ ದೇವೇಗೌಡ- 92, ಅವರು ಶತಕ ಬಾರಿಸಲಿ ಎಂದು  ಹಾರೈಸುತ್ತಾ........

ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮಾತನಾಡಿ, ಸೋಮಣ್ಣಗೆ ಯಾವಾಗ ಜ್ಯೋತಿಷಿ ಹೇಳಿದ್ರೋ ಗೊತ್ತಿಲ್ಲ. ಜನವರಿ ಒಳಗೆ ಈ ಸರ್ಕಾರ ಹೋಗುತ್ತೆ ಅಂತ ಹೇಳಿದ್ದಾರೆ. ನನಗೆ ಭವಿಷ್ಯ ಕೇಳೋ ಅಭ್ಯಾಸ ಇದೆ. ಸೋಮಣ್ಣ ಅವ್ರಿಗೆ ಯಾವಾಗ ಬಂತೊ ಗೊತ್ತಿಲ್ಲ. ಭಾಷಣದ ವೇಳೆ ದೇವೇಗೌಡರು ನಗೆ ಚಟಾಕಿ ಹಾರಿಸಿದ್ದಾರೆ. ಮಗನನ್ನ ಚುನಾವಣೆಗೆ ನಿಲ್ಲಿಸಿದ್ದಕ್ಕೆ ಕುಮಾರಸ್ವಾಮಿ ಅಪರಾಧಿ ಆದ್ರು. 50 ಕೋಟಿ ಚುನಾವಣೆಗೆ ಕೇಳಿದ್ರು ಅಂತಾ ಕೇಸ್ ಹಾಕಿದ್ರು. ಅಧಿಕಾರ ದುರ್ಬಳಕೆ ಮಾಡಿದರೆಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.