ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಬಿದ್ದ ಘಟನೆಯೊಂದು ನಡೆದಿದ್ದು, ಆರಂಭದಲ್ಲಿ ಇದೊಂದು ಆಕಸ್ಮಿಕ ಅವಘಡ ಎಂದು ಭಾವಿಸಲಾಗಿತ್ತು. ಆದರೆ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ನಾನೇ ಬೆಂಕಿ ಹಚ್ಚಿದ್ದು ಎಂದು ಹೇಳಿ ಶರಣಾಗಿದ್ದಾನೆ.
ಹೌದು, ಮೊಹಮ್ಮದ್ ನದೀಮ್ ಎಂಬಾತ ಮೂರು ದಿನಗಳ ಹಿಂದೆ ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದನು. ಆದರೆ ಪ್ರಾರಂಭದಿಂದಲೂ ಅದು ಕೈ ಕೊಡುತ್ತಾ ಬಂದಿತ್ತು. ಎರಡು ಬಾರಿ ಹೋಗಿ ರಿಪೇರಿ ಮಾಡಿಸಿದರೂ ಸಮಸ್ಯೆ ಬಗೆಹರಿಯಲಿಲ್ಲವೆಂದು ಕೋಪಗೊಂಡ ಪೆಟ್ರೋಲ್ ಹಾಕಿ ಶೋರೂಂನಲ್ಲಿದ್ದ ಎಲ್ಲ ಬೈಕ್‌ಗಳಿಗೆ ಬೆಂಕಿ ಸುಟ್ಟಿದ್ದಾನೆ.
ಈ ಘಟನೆ ಬಳಿಕ ನದೀಮ್ ತಾನೇ ಪೊಲೀಸ್ ಠಾಣೆಗೆ ತೆರಳಿ ಬೆಂಕಿ ಇಟ್ಟಿರುವ ವಿಚಾರ ತಿಳಿಸಿದ್ದಾನೆ. ಈ ವೇಳೆ ಪೊಲೀಸರೇ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ. ಬಳಿಕ ಚೌಕ್ ಠಾಣೆ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.