ಬೆಂಗಳೂರಿನ ಬ್ಯಾಡರಹಳ್ಳಿ ಮುಖ್ಯ ಶಿಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ, ಡೆತ್‌ನೋಟ್ ಸೀಕ್ರೆಟ್ ಟ್ವಿಸ್ಟ್ ನೀಡಿದೆ. ಕಾಂಗ್ರೆಸ್ ಮುಖಂಡನ ವಿರುದ್ಧ ಜಮೀನು ಕಬಳಿಕೆ ಆರೋಪಿಸಿ ಮುಖ್ಯ ಶಿಕ್ಷಕ ನೇಣಿಗೆ ಶರಣಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಎಂಬುವರ ಹೆಸರು ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ.
ಪ್ರೌಢಶಾಲಾ ಶಿಕ್ಷಕ ನರಸಿಂಹಮೂರ್ತಿ ಮಾಗಡಿ ರಸ್ತೆಯ ತುಂಗಾನಗರದಲ್ಲಿ 25 ಗುಂಟೆ ಜಮೀನು ಹೊಂದಿದ್ದರು. ಅದನ್ನು 10 ಕೋಟಿಗೆ ಖರೀದಿಸುವುದಾಗಿ ಕಾಂಗ್ರೆಸ್ ಮುಖಂಡ ಸತೀಶ್ ಹತ್ತು ಲಕ್ಷ ನೀಡಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಉಳಿದ ಹಣವನ್ನು ನೀಡದೇ ಸತೀಶ್ ಜಮೀನು ಲಪಟಾಯಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದಾರೆ. ಇದರಿಂದಾಗಿ ನರಸಿಂಹಮೂರ್ತಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಡೆತ್‌ನೋಟ್‌ನಲ್ಲಿ ಸತೀಶ್ ಸೇರಿದಂತೆ ಇನ್ನೂ ಇಬ್ಬರ ಹೆಸರು ಉಲ್ಲೇಖವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.