ದೇಶ

ತಾಂತ್ರಿಕ ದೋಷದಿಂದ ಹೆಲಿಕ್ಯಾಪ್ಟರ್ ಪತನ..!

ಕೇದಾರನಾಥದಲ್ಲಿ 2024 ಮೇ 24ರಂದು ಲ್ಯಾಂಡಿಂಗ್ ಮಾಡುವ ವೇಳೆ ಹೆಲಿಕಾಪ್ಟರ್​ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೆಲಿಕಾಪ್ಟರ್ ನ್ನು ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಸಹಾಯದಿಂದ ನೇತುಹಾಕಿ ಗೌಚಾರ್ ಗೆ ಸಾಗಿಸುವ ವೇಳೆ ಹಾರಾಟದ ಸಮಯದಲ್ಲಿ ಟೋಯಿಂಗ್ ಚೈನ್ ಮುರಿದು ಬಿದಿದ್ದೆ.

ಡೆಹ್ರಾಡೂನ್: ಇಂದು ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಹೆಲಿಕಾಪ್ಟರ್ ಪತನಗೊಂಡ ಘಟನೆ ನಡೆದಿದೆ. ಕೆಟ್ಟುಹೋಗಿದ್ದ ಹೆಲಿಕಾಪ್ಟರ್ ಅನ್ನು ಸರಿಪಡಿಸುವ ಸಲುವಾಗಿ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ನಿಂದ ಗೌಚಾರ್ ಗೆ ಕೊಂಡೊಯ್ಯವ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಕೇದಾರನಾಥದಲ್ಲಿ 2024 ಮೇ 24ರಂದು ಲ್ಯಾಂಡಿಂಗ್ ಮಾಡುವ ವೇಳೆ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೆಲಿಕಾಪ್ಟರ್ ನ್ನು ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಸಹಾಯದಿಂದ ನೇತುಹಾಕಿ ಗೌಚಾರ್ ಗೆ ಸಾಗಿಸುವ ವೇಳೆ ಹಾರಾಟದ ಸಮಯದಲ್ಲಿ ಟೋಯಿಂಗ್ ಚೈನ್ ಮುರಿದು ಬಿದಿದ್ದೆ. 

ಪಿಟಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಅಪಘಾತಕ್ಕೀಡಾಗುವ ಮೊದಲು ಹೆಲಿಕಾಪ್ಟರ್ ಹಾರಾಟದ ವೇಳೆ ಗಾಳಿಯಲ್ಲಿ ತೂಗಾಡುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಂತ್ರಿಕ ದೋಷ ಕಂಡ ಕೂಡಲೆ ಪೈಲಟ್ ಬುದ್ಧಿವಂತಿಕೆಯಿಂದ ಕೇದಾರನಾಥ ಹೆಲಿಪ್ಯಾಡ್ ಗೆ ಸ್ವಲ್ಪ ದೂರದಲ್ಲಿ ಹೆಲಿಕಾಪ್ಟರ್ ಅನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ. ಖಾಲಿ ಜಾಗವನ್ನು ನೋಡಿದ ಬಳಿಕ ಹೆಲಿಕಾಪ್ಟರ್ ನ್ನು ಕಣಿವೆಯಲ್ಲಿ ಇಳಿಸಲಾಗಿತ್ತು. ಇಂದು ಹೆಲಿಕಾಪ್ಟರ್ ರಿಪೇರಿ ಮಾಡಲು ಗೌಚಾರ್ ಏರ್‌ಸ್ಟ್ರಿಪ್‌ಗೆ ಕೊಂಡೊಯ್ಯುವ ಯೋಜನೆ ಇತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪ್ರವಾಸೋದ್ಯಮ ಅಧಿಕಾರಿ ಹೇಳಿದರು ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ಹೇಳಿದರು.