ಕರ್ನಾಟಕ
ಹೇಮಂತ್ ಹೆಗ್ಡೆ ನಿರ್ದೇಶನದ "ನಾ ನಿನ್ನ ಬಿಡಲಾರೆ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
ಹೇಮಂತ್ ಹೆಗ್ಡೆ ನಿರ್ದೇಶನದ ಬಹು ನಿರೀಕ್ಷಿತ "ನಾ ನಿನ್ನ ಬಿಡಲಾರೆ ಘೋಸ್ಟ್ 2.0" ಹಾರಾರ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತಿಚೆಗಷ್ಟೇ ಸಕಲೇಶಪುರದ ಸುತ್ತ ಮುತ್ತ ಮುಕ್ತಾಯಗೊಂಡಿತು.
ಹೇಮಂತ್ ಹೆಗ್ಡೆ ನಿರ್ದೇಶನದ ಬಹು ನಿರೀಕ್ಷಿತ "ನಾ ನಿನ್ನ ಬಿಡಲಾರೆ ಘೋಸ್ಟ್ 2.0" ಹಾರಾರ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇತ್ತಿಚೆಗಷ್ಟೇ ಸಕಲೇಶಪುರದ ಸುತ್ತ ಮುತ್ತ ಮುಕ್ತಾಯಗೊಂಡಿತು. ಸುಮಾರು ಹತ್ತು ದಿನಗಳ ಈ ಶೆಡ್ಯೂಲ್ ನಲ್ಲಿ ಅಪೂರ್ವ ಮತ್ತು ಹೇಮಂತ್ ಬಾಗವಹಿಸಿದ್ದ ಹಲವು ರೋಚಕ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ಇದಲ್ಲದೆ ಶಂಕರ್ ಅಶ್ವಥ್ ಹಾಗೂ ಸುಚೇಂದ್ರ ಪ್ರಸಾದ್ ಭಾಗವಹಿಸಿದ ಹಲವು ಸನ್ನಿವೇಶಗಳ ಚಿತ್ರೀಕರಣ ಸಹ ನಡೆಯಿತು..
ಹೇಮಂತ್ ಹೆಗ್ಡೆ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಪೂರ್ವ, ಕಿಶೋರ್, ಶರತ್ ಲೋಹಿತಾಶ್ವ , ಭಾವನ ನಾಜರ್ ಮುಂತಾದ ಕಲಾವಿದರ ದಂಡೇ ಇದೆ ..ಇನ್ನೊಂದು ವಿಶೇಷ ಎಂದರೆ ಈ ಚಿತ್ರದ ಗ್ರಾಫಿಕ್ಸ್ ಸಿಂಗಾಪುರದ ಸ್ಟುಡಿಯೋ ಒಂದರಲ್ಲಿ ತಯಾರಾಗಲಿದೆ. ಚಿತ್ರದ ಮೂರನೇ ಹಂತದ ಚಿತ್ರೀಕರಣ ಫೆಬ್ರವರಿ ಯಲ್ಲಿ ಶುರುವಾಗಲಿದೆ. ಚಿತ್ರ ಜೂನ್ ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ ..