ಕರ್ನಾಟಕ

ಹೈವೇ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ ಕ್ರಿಡಿಟ್‌ ಫೈಟ್..!

ಹೆದ್ದಾರಿ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆ.ಸಿ.ನಾರಾಯಣಗೌಡ ಬೆಂಬಲಿಗರ ನಡುವೆ ಕ್ರೆಡಿಟ್‌ ಕುಸ್ತಿ ಶುರುವಾಗಿದೆ.

ಮೈತ್ರಿ ಪಕ್ಷಗಳ ನಡುವೆ ಇದೀಗ ಕ್ರೆಡಿಟ್‌ ಫೈಟ್‌ ಶುರುವಾಗಿದೆ. ಹೆದ್ದಾರಿ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸಚಿವ  ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆ.ಸಿ.ನಾರಾಯಣಗೌಡ ಬೆಂಬಲಿಗರ ನಡುವೆ ಕ್ರೆಡಿಟ್‌ ಕುಸ್ತಿ ಶುರುವಾಗಿದೆ. ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿ ಅಭಿವೃದ್ದಿ ವಿಚಾರವಾಗಿ ಫೈಟ್ ಶುರುವಾಗಿದೆ. ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿದ್ದ ಹೆಚ್‌ಡಿಕೆ, ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದರು. ನಿತಿನ್‌ ಗಡ್ಕರಿ ಅವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಹೆಚ್‌ಡಿಕೆ ಸೋಷಿಯಲ್‌ ಮೀಡಿಯಾದಲ್ಲೂ ಪೋಸ್ಟ್‌ ಹಂಚಿಕೊಂಡಿದ್ದರು. 

ಇನ್ನು ಇದೇ ವಿಚಾರವಾಗಿ ಹೆಚ್‌ಡಿಕೆ ಹಾಗೂ ಜೆಡಿಎಸ್‌ ವಿರುದ್ಧ ಮಾಜಿ ಸಚಿವ ನಾರಾಯಣಗೌಡ ಬೆಂಬಲಿಗರು ಕಿಡಿ ಕಾರಿದ್ದರು. ಹೆಚ್ಡಿಕೆಗೂ ಮೊದಲೇ ಈ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡ ಅವರು ಮನವಿ ಮಾಡಿದ್ರು. ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯಾಗಿಸಲು ಹಿಂದೆಯೇ ಒಪ್ಪಿಗೆ ನೀಡಿದ್ರು. ಭಾರತ್ ಮಾಲಾ ಯೋಜನೆಯಡಿ ನೋಂದಣಿ ಸಹ ಆಗಿದೆ ಎಂದು ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾರಾಯಣಗೌಡ ಈ ಹಿಂದೆ ನಿತಿನ್ ಗಡ್ಕರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದ ದಾಖಲೆ ಬಿಡುಗಡೆ ಮಾಡಲಾಗಿದೆ. ಶ್ರೀರಂಗಪಟ್ಟಣ-ಅರಸೀಕೆರೆ ಹೆದ್ದಾರಿ ಅಭಿವೃದ್ದಿಗೆ ನಾರಾಯಣಗೌಡರೇ ಕಾರಣ ಎಂದು ಫೈಟ್ ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣದ ಮೂಲಕ ಜೆಡಿಎಸ್ ಗೆ ಬಿಜೆಪಿ ಕೌಂಟರ್ ಕೊಟ್ಟಿದೆ.