ವೈರಲ್

ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಹಿಂದಿ ಗ್ಯಾಂಗ್‌ನಿಂದ ಮಾರಣಾಂತಿಕ ಹಲ್ಲೆ..!

ಐ.ವಿ. ಕೃಷ್ಣಮೂರ್ತಿ ಎಂಬುವವರ ಮಗ್ಗದ ಮನೆಯಲ್ಲಿ ಸುಮಾರು 9 ವರ್ಷದಿಂದ ಶಿವಲಿಂಗ ಕೆಲಸ ಮಾಡುತ್ತಿದ್ದರು. ಕಳೆದ 3 ತಿಂಗಳ ಹಿಂದೆ ಉತ್ತರ ಭಾರತದಿಂದ 3 ಜನ ಕೆಲಸಕ್ಕೆಂದು ಬಂದಿದ್ದರು. ಆರಂಭದಿಂದಲೂ ಭಾಷೆ ವಿಚಾರಕ್ಕೆ ಜಗಳ ನಡೆಯುತ್ತಲೆ ಇತ್ತು. ಬುಧವಾರವೂ ಕೂಡ ಭಾಷೆ ವಿಚಾರವಾಗಿ ಜಗಳ ನಡೆದಿದೆ, ಆಗ ಶಿವಲಿಂಗನ ತಲೆಗೆ ಹಿಂದಿ ಭಾಷಿಕರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ.

ಆನೇಕಲ್ :  ಕನ್ನಡದಲ್ಲಿ ಮಾತಾಡಿ, ಕನ್ನಡ ಬಾಷೆಯನ್ನ ಕಲಿಯಿರಿ ಎಂದಿದ್ದಕ್ಕೆ ಉತ್ತರ ಪ್ರದೇಶ ಮೂಲದ ವ್ಯಕ್ತಿ ಕನ್ನಡಿಗನಿಗೆ  ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಠಾಣಾ ವ್ಯಾಪ್ತಿಯ ಸರಸ್ವತಿ ವಿದ್ಯಾ ಮಂದಿರ ಸಮೀಪದ ಮಗ್ಗದ ಮನೆಯಲ್ಲಿ ನಡೆದಿದೆ.  ರುದ್ರಮ್ಮ ಲೇಔಟ್ ನಿವಾಸಿ ಶಿವಲಿಂಗನ ಮೇಲೆ ಉತ್ತರ ಪ್ರದೇಶದ ಮನು ಅನ್ಸಾರಿ ಹಾಗೂ ಇತರರು  ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ದೇಹದ ಇತರ ಬಾಗಕ್ಕೆ ಹಲ್ಲೆ ನಡೆಸಿದ್ದಾರೆ. 

ಐ.ವಿ. ಕೃಷ್ಣಮೂರ್ತಿ ಎಂಬುವವರ  ಮಗ್ಗದ ಮನೆಯಲ್ಲಿ ಸುಮಾರು 9 ವರ್ಷದಿಂದ ಶಿವಲಿಂಗ ಕೆಲಸ ಮಾಡುತ್ತಿದ್ದರು. ಕಳೆದ 3 ತಿಂಗಳ ಹಿಂದೆ ಉತ್ತರ ಭಾರತದಿಂದ 3 ಜನ ಕೆಲಸಕ್ಕೆಂದು ಬಂದಿದ್ದರು. ಆರಂಭದಿಂದಲೂ ಭಾಷೆ ವಿಚಾರಕ್ಕೆ ಜಗಳ ನಡೆಯುತ್ತಲೆ ಇತ್ತು. ಬುಧವಾರವೂ ಕೂಡ ಭಾಷೆ ವಿಚಾರವಾಗಿ ಜಗಳ ನಡೆದಿದೆ, ಆಗ ಶಿವಲಿಂಗನ ತಲೆಗೆ ಹಿಂದಿ ಭಾಷಿಕರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಅದೃಷ್ಟವಶಾತ್ ಶಿವಲಿಂಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಈ ಘಟನೆ ಸಂಬಂಧ ಆನೇಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.