ಮೈಸೂರು: ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ರಾತ್ರೋರಾತ್ರಿ ಹಲವು ಆಸ್ತಿಗಳು ವಕ್ಫ್ ಆಸ್ತಿ ಆಗಿ ಬದಲಾಗುತ್ತಿವೆ ಅಂತಾ ಮೈಸೂರಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.. ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಆತಂಕ ಇದ್ದೇ ಇರುತ್ತದೆ, ರೈತರು ಮತ್ತು ಹಿಂದೂಗಳ ಭೂಮಿಗೆ ಕಂಟಕ ಬಂದಿದೆ ಅಂತಾ ಕಿಡಿಕಾರಿದ್ದಾರೆ..
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಗಣೇಶ ದೇವಸ್ಥಾನದ ಆಸ್ತಿನ ವಕ್ಫ್ ಆಸ್ತಿ ಎಂದು ಬರೆಸಿಕೊಂಡಿದ್ದಾರೆ.. ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಆಶ್ರಯ ಕೊಟ್ಟಿದ್ದೇ ಭಾರತ, ಮಂತ್ರಾಲಯಕ್ಕೆ ನಾವು ಜಮೀನು ಕೊಟ್ಟಿದ್ದು ಅಂತಾ ಮುಸ್ಲಿಂರು ಹೇಳುತ್ತಾರೆ, ಅದೇನೂ ಅವರ ಆಸ್ತಿನಾ? ಹಿಂದೂ ಧರ್ಮದ ಜಾಗವಿದು. ಅದನ್ನು ನಮಗೆ ಅವರು ಕೊಡುವುದು ಅಂದರೆ ಹೇಗೆ ಹೇಳಿ ಅಂತಾ ಪ್ರಶ್ನಿಸಿದ್ದಾರೆ..