ವೈರಲ್

HMVP ಜೀವಕ್ಕೆ ಹಾನಿಕಾರಕ ವೈರಸ್‌ ಅಲ್ಲ - ದಿನೇಶ್‌ ಗುಂಡೂರಾವ್‌

ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಚೀನಾದಲ್ಲಿ ಕಾಣಿಸಿಕೊಂಡಿರುವ ಹ್ಯೂಮನ್‌ಮೆಟಫೆಮೊ ವೈರಸ್‌ (ಹೆಚ್‌ಎಂವಿಪಿ) ಕಾಣಿಸಿಕೊಂಡಿದ್ದರೂ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ..

ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಚೀನಾದಲ್ಲಿ ಕಾಣಿಸಿಕೊಂಡಿರುವ ಹ್ಯೂಮನ್‌ಮೆಟಫೆಮೊ ವೈರಸ್‌ (ಹೆಚ್‌ಎಂವಿಪಿ) ಕಾಣಿಸಿಕೊಂಡಿದ್ದರೂ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಸುದ್ದಿಗೋ‍ಷ್ಠಿ ನಡೆಸಿದ ಸಚಿವ ದಿನೇಶ್‌ ಗುಂಡೂರಾವ್‌, ಹೆಚ್‌ಎಂವಿಪಿ ಹಾನಿಕಾರಕ ವೈರಸ್‌ ಅಲ್ಲ.. ಇದು 2001ರಲ್ಲಿಯೇ ಪತ್ತೆಯಾಗಿತ್ತು ಎಂದಿದ್ದಾರೆ.. ಕೆಲ ತಪಾಸಣೆ ಮಾಡಿದಾಗ ಕೇವಲ ಒಂದು ಪರ್ಸೆಂಜ್ ಬರುತ್ತೆ, ವೈರಸ್ ಬಂದ ಮಕ್ಕಳಲ್ಲಿ ಒಬ್ಬರು ಡಿಸ್ಸಾರ್ಜ್ ಅಗಿದ್ದಾರೆ, ಮತ್ತೊಂದು ಮಗು ನಾಳೆ ಡಿಸ್ಚಾರ್ಜ್‌ ಅಗುತ್ತೆ ಎಂದಿದ್ದಾರೆ.. 

ಹೆಚ್‌ಎಂವಿಪಿ ಕಾಣಿಸಿಕೊಂಡಿದ್ದರೂ ಸದ್ಯ ಯಾವುದೇ ಅತಂಕಪಡುವ ಅಗತ್ಯ ಇಲ್ಲ,  ಮಾಸ್ಕ್ ಕಡ್ಡಾಯವಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.. ಹೆಚ್‌ಎಂವಿಪಿ ವೈರಸ್‌ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ, ಚಳಿಗಾಲದಲ್ಲಿ ನಿಮ್ಮ ಮಕ್ಕಳ ಬಗ್ಗೆ ಗಮನ ಇರಲಿ, HMVP ವೈರಸ್ ಗುಣಲಕ್ಷಣಗಳ ಬಗ್ಗೆ ಪುಣೆ ಲ್ಯಾಬ್‌ಗೆ ಸ್ಯಾಂಪಲ್ಸ್‌ ಕಳುಹಿಸಲಾಗಿದೆ.. ಮಕ್ಕಳಿಗೆ ಹಾಗೂ ಹಿರಿಯರಲ್ಲಿ ಈ ವೈರಸ್‌ ಕಂಡು ಬರುತ್ತೆ.. ಯಾವುದೇ ರ್ಯಾಂಡಮ್ ಟೆಸ್ಟ್ ಮಾಡಲ್ಲ, ಕೇಂದ್ರ ಸರ್ಕಾರ ಸದ್ಯ ಯಾವುದೇ ಸೂಚನೆ ಕೊಟ್ಟಿಲ್ಲ, ಏರ್‌ಪೋರ್ಟ್.. ಬಸ್ ನಿಲ್ದಾಣಗಳಲ್ಲಿ ಯಾವುದೇ ಬಗೆಯ ಟೆಸ್ಟ್ ಮಾಡಲ್ಲ ಎಂದಿದ್ದಾರೆ..