ಸಂಚಾರ ಪೊಲೀಸರು ಜನರ ಸೇವೆಗೆ ಅಸ್ತ್ರಂ ಆ್ಯಪ್ ಪರಿಚಯ ಮಾಡಿದ್ದು, ಈ ಆಪ್‌ಅನ್ನ ಗೃಹಸಚಿವ ಜಿ. ಪರಮೇಶ್ವರ್ ಪರಿಚಯಿಸಿದ್ದಾರೆ. ಸಂಚಾರಿ ನಿಯಮಗಳು, ಟ್ರಾಫಿಕ್, ಅಪಘಾತ ವರದಿಗಳ ಬಗ್ಗೆ ಈ ಆ್ಯಪ್‌ನಲ್ಲಿ ಮಾಹಿತಿ ದೊರಕುತ್ತದೆ.
ಅಸ್ತ್ರಂ ಆ್ಯಪ್ ನ ವಿಶೇಷತೆಗಳೇನು..?
ಸಂಚರಿಸುವಾಗ ಎಲ್ಲೆಲ್ಲಿ ಎಷ್ಟು ಟ್ರಾಫಿಕ್ ಉಂಟಾಗಿದೆ ಅನ್ನೋದನ್ನ ಈ ಆ್ಯಪ್ ಮೂಲಕ ಲೈವ್‌ನಲ್ಲಿ ವೀಕ್ಷಸಬಹದು. ಎಲ್ಲಾದರೂ ಅಪಘಾತವಾದರೆ ಆ್ಯಪ್ ಮೂಲಕ ಅಪ್ಡೇಟ್ ಮಾಡಬಹುದು. ಸಂಚಾರಿ ಉಲ್ಲಂಘನೆ ಬಗ್ಗೆ ವರದಿ ಮಾಡಬಹುದು. ಜೊತೆಗೆ ಆ್ಯಪ್ ಮೂಲಕ ದಂಡ ಕಟ್ಟಲು ಅವಕಾಶ ದೊರಕುತ್ತದೆ. ಒಂದು ವೇಳೆ ತಪ್ಪಾಗಿ ದಂಡ ಹಾಕಿದ್ದರೆ ಈ ಆ್ಯಪ್ ಮೂಲಕ ಪ್ರಶ್ನೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.