ಬೆಂಗಳೂರು : ಇಂದು ಬೆಳಗ್ಗೆ ಗೃಹ ಸಚಿವ ಪರಮೇಶ್ವರ್ ದೆಹಲಿಗೆ ತೆರಳಿದ್ದಾರೆ. ಗೃಹ ಇಲಾಖೆಯ ಕೆಲಸದ ಮೇಲೆ ಪರಮೇಶ್ವರ್ ದೆಹಲಿ ಪ್ರಯಾಣವನ್ನ ಬೆಳೆಸಿದ್ದಾರೆ. ಇದೇ ವೇಳೆ ಎಐಸಿಸಿ ಕಚೇರಿಗೂ ಭೇಟಿ ಮಾಡಿ ಹೈಕಮಾಂಡ್ ನಾಯಕರ ಜೊತೆ ಪರಮೇಶ್ವರ್ ಮಾತುಕತೆ ನಡೆಸಲಿದ್ದಾರೆ.
ವೇಣುಗೋಪಾಲ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿಗೆ ಪರಮೇಶ್ವರ್ ಸಮಯವನ್ನ ಕೇಳಿದ್ಧಾರೆ. ರಾಜ್ಯ ರಾಜಕಾರಣ ಹಾಗೂ ರಾಜ್ಯ ಕಾಂಗ್ರೆಸ್ ವಿಧ್ಯಾಮಾನ ಸೇರಿದಂತೆ ಜಾತಿ ಜನಗಣತಿ ವಿಳಂಬದ ಬಗ್ಗೆಯೂ ಪರಮೇಶ್ವರ್ ಹೈಕಮಾಂಡ್ ನಾಯಕರ ಗಮನ ಸೆಳೆಯುವ ಸಾಧ್ಯತೆ ಇದೆ.
ಜಾತಿ ಜನಗಣತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ಸೂಚಿಸುವಂತೆ ಹೈಕಮಾಂಡ್ ಪರಮೇಶ್ವರ್ ಮನವಿ ಮಾಡಲಿದ್ದಾರೆ.