ವೈರಲ್

ನನ್ನ ಅತ್ತೆ ಕಾಟ ಕೊಡ್ತಾರೆ.. ಆಕೆಯನ್ನ ಸಾಯಿಸೋದು ಹೇಗೆ.. ಮಹಿಳೆಯ ಮೆಸೇಜ್‌ ನೋಡಿ ವೈದ್ಯ ಶಾಕ್

ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡ್ತಾರೆ. ಏನಾದ್ರೂ ಹೇಳ್ತಿರಾ ಹೇಗೆ ಸಾಯಿಸೋದು ಅಂತ. ಟ್ಯಾಬ್ಲೆಟ್‌ ಒಂದು.. ಎರಡು ತೊಗೊಂಡ್ರೆ ಸಾಯ್ತರಲ್ಲ ಅದು ಹೇಳಿ ಎಂದು ಡಾಕ್ಟರ್ ಗೆ ವಾಟ್ಸಾಪ್ ನಲ್ಲಿ ಕೇಳಿದ್ದಾಳೆ.

ಬೆಂಗಳೂರು : ಡಾಕ್ಟರ್‌ಗೆ ಮೆಸೇಜ್‌ ಮಾಡಿ.. ನನನಗೆ ಮೈ ಹುಶಾರಿಲ್ಲ. ಯಾವುದಾದರು ಮಾತ್ರೆ, ಸಿರಪ್‌ ತಗೋಬೇಕು ಹೇಳಿ ಅನ್ನೋರನ್ನ ನೋಡಿರ್ತೀವಿ. ಆದರೆ, ಬೆಂಗಳೂರಿನಲ್ಲೊಬ್ಬ ಮಹಿಳೆ ವೈದ್ಯರಿಗೆ ವಿಚಿತ್ರವಾಗಿ ಮೆಸೇಜ್‌ ಮಾಡಿದ್ದಾಳೆ. ಹೌದು, ನನ್ನ ಅತ್ತೆಯನ್ನ ಸಾಯಿಸಲು ಮಾತ್ರೆ ಬರೆದುಕೊಡಿ  ಎಂದು ಮಹಿಳೆ ಒಬ್ಬರು ಡಾಕ್ಟರ್‌ಗೆ ಮೆಸೇಜ್‌ ಮಾಡಿದ್ದಾಳೆ.  ಮಹಿಳೆಯ ಈ ಮೆಸೇಜ್‌ ನೋಡಿ ಆತಂಕಕ್ಕೊಳಗಾದ ವೈದ್ಯರು ಸೀದಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

ಡಾಕ್ಟರ್ ಸುನೀಲ್ ಕುಮಾರ್ ಎಂಬ ವೈದ್ಯರಿಗೆ ಇನ್‌ ಸ್ಟಾಗ್ರಾಂ ಮೂಲಕ  ನಂಬರ್ ಪಡೆದಿದ್ದ ಮಹಿಳೆ, ನಿನ್ನೆ ವಾಟ್ಸಾಪ್‌ನಲ್ಲಿ ಮೆಸೇಜ್‌ ಮಾಡಿದ್ದಾಳೆ. ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡ್ತಾರೆ. ಏನಾದ್ರೂ ಹೇಳ್ತೀರ ಹೇಗೆ ಸಾಯಿಸೋದು ಅಂತ. ಟ್ಯಾಬ್ಲೆಟ್‌ ಒಂದು.. ಎರಡು ತೊಗೊಂಡ್ರೆ ಸಾಯ್ತರಲ್ಲ ಅದು ಹೇಳಿ ಎಂದು ಡಾಕ್ಟರ್ ಗೆ ವಾಟ್ಸಾಪ್ ನಲ್ಲಿ ಕೇಳಿದ್ದಾಳೆ. ಆದರೆ ಸ್ವಲ್ಪ ಸಮಯದ ಬಳಿಕ ಆ ಮಹಿಳೆ ಎಲ್ಲಾ ಮೆಸೇಜ್‌ಗಳನ್ನ ಡಿಲೀಟ್‌ ಮಾಡಿ, ನಂಬರ್‌ ಬ್ಲಾಕ್‌ ಮಾಡಿದ್ದಾಳೆ.