Duniya Vijay - Wikipedia ಅಭಿನಯದ Bheema (2024 film) - Wikipedia ಸಿನಿಮಾವು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಆಗಸ್ಟ್ 9ರಂದು ತೆರೆಕಂಡಿದ್ದ ಭೀಮನ ಘರ್ಜನೆ ಜೋರಾಗಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಪ್ರಿಯಾ ಷಠಮರ್ಷಣ, ಕಲ್ಯಾಣಿ, ಅಶ್ವಿನಿ ಮುಂತಾದವರು ನಟಿಸಿರುವ 'ಭೀಮ' ಸಿನಿಮಾ, ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಕಲೆಕ್ಷನ್ ಮಾಡಿದೆ. ಕಳೆದ 10 ದಿನಗಳಲ್ಲಿ 'ಭೀಮ' ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇಲ್ಲಿದೆ. ಇದೀಗ 'ಭೀಮ' ಸಿನಿಮಾವು ಆ ವಿಚಾರದಲ್ಲಿ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ತು ಗೆ ತುಸು ಚೇತರಿಕೆಯನ್ನು ತಂದುಕೊಟ್ಟಿದೆ.
ಭೀಮ' ಸಿನಿಮಾದ ಕಲೆಕ್ಷನ್ ಎಷ್ಟು?
ಪ್ರೇಕ್ಷಕರಿಲ್ಲದೇ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳು ಪುನಃ ತುಂಬುವಂತೆ ಮಾಡಿದ್ದು 'ಭೀಮ' ಸಿನಿಮಾ. 'ದುನಿಯಾ' ವಿಜಯ್ ಅವರ ಈ ಸಿನಿಮಾಕ್ಕೆ ಆರಂಭದಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಹಲವು ದಿನಗಳಿಂದ ಹೌಸ್ ಫುಲ್ ಬೋರ್ಡ್ ಅನ್ನೇ ನೋಡದ ಥಿಯೇಟರ್ ಗಳು ಭರ್ತಿಯಾಗಿದ್ದವು. ಅಂದಹಾಗೆ, ಮೊದಲ ಮೂರು ದಿನಗಳು ಭಾರಿ ಪ್ರಮಾಣದ ಗಳಿಕೆ ಕಂಡಿದ್ದ 'ಭೀಮ' ಸಿನಿಮಾವು ನಂತರದ ದಿನಗಳಲ್ಲಿ ಕೊಂಚ ಇಳಿಮುಖವಾಗಿತ್ತು. ಸದ್ಯ ಈ ಸಿನಿಮಾ ತೆರೆಕಂಡು ಭರ್ತಿ 10 ದಿನಗಳು ಕಳೆದಿದ್ದು ಈವರೆಗೂ 20 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿರುವ ಮಾಹಿತಿ ಸಿಕ್ಕಿದೆ.
ಓಟಿಟಿ & ಸ್ಯಾಟಲೈಟ್ ಹಕ್ಕುಗಳು..
ಆರಂಭದಲ್ಲಿ 'ಭೀಮ' ಸಿನಿಮಾದ OTT & ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿರಲಿಲ್ಲ. ನಿರ್ಮಾಪಕರು ಕೇಳಿದ ರೇಟ್ ಗೆ ಯಾರು ಕೂಡ ಓಕೆ ಎಂದಿರಲಿಲ್ಲ. ಹಾಗಾಗಿ, ಹಕ್ಕುಗಳು ಮಾರಾಟವಾಗದೇ ಇದ್ದರೂ ಸಿನಿಮಾವನ್ನು ತೆರೆಕಾಣಿಸಲಾಗಿತ್ತು. ಸದ್ಯ 'ಭೀಮ' ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದರಿಂದ ಮತ್ತೆ ಓಟಿಟಿ & ಸ್ಯಾಟಲೈಟ್ ಹಕ್ಕುಗಳಿಗೆ ಬೇಡಿಕೆ ಬಂದಿದೆ.