ಬೆಂಗಳೂರು : ಕುರಿಗಾಹಿ ಹನುಮಂತ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಕಪ್ ತಮ್ಮದಾಗಿಸಿಕೊಂಡಿದ್ದಾರೆ. ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಅರ್ಧಕ್ಕೇ ಎಂಟ್ರಿಕೊಟ್ಟ ಹನುಮಂತ ಅವರು, ಕೇವಲ ಜಗಳ-ಗಲಾಟೆಗಳಲ್ಲೇ ಕೆಟ್ಟುಹೋಗಿದ್ದ ದೊಡ್ಮನೆಯಲ್ಲಿ ನಗುವಿನ ಹೊಳೆಹರಿಸಿದ್ರು. ಅಷ್ಟೇ ಅಲ್ಲದೇ, ತಮ್ಮ ಮುಗ್ಧತೆ, ಸರಳತೆ ಜೊತೆಗೆ ತಾವು-ತಾವಾಗೆ ಇದ್ದು ಇಜನಮನಗೆಲ್ಲುವಿದರ ಜೊತೆಗೆ ಬಿಗ್ ಬಾಸ್‌ಕಪ್ ಕೂಡ ಗೆದು ಬೀಗಿದ್ದಾರೆ.
ಜವಾರಿ ಹುಡುಗ ಕಪ್ಪ ಗೆದ್ದಿರುವುದಕ್ಕೆ ಕನ್ನಡಿಗರು ಫುಲ್ ಖುಷಿಯಾಗಿದ್ದು, ‘ಒಳ್ಳೆಯತನಕ್ಕೆ ಜಯ ಇದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಕಾಮೆಂಟ್‌ಗಳ ಮೂಲಕ ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ.
ಹನುಮಂತಗೆ ಬಿಗ್ ಬಾಸ್‌ನಿಂದ ಸಿಗುವ ಹಣವೆಷ್ಟು?
ಇನ್ನೂ ಹನುಮಂತ ಅವರಿಗೆ 50 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ ಆದ್ರೆ, ಇದರಲ್ಲಿ ಸಂಪೂರ್ಣ ಹನ ಹನುಮಂತ ಅವರಿಗೆ ಸಿಗುವುದಿಲ್ಲ. ಬಿಗ್ ಬಾಸ್ ಗೆದ್ದ ಹಣಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ. ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಹಾಗಾಗಿ ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಹೀಗಾಗಿ ಹನುಮಂತಗೆ ಅವರಿಗೆ ಕೇಲವ 35 ಲಕ್ಷ ರೂಪಾಯಿ ಹಣ ಮಾತ್ರ ಸಿಗಲಿದೆ.