ಹುಬ್ಬಳ್ಳಿ : ಸೈಡ್ ಕೊಡಿ ಎಂದು ಕೇಳಿದ್ದಕ್ಕೆ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆಯೊಂದು ಜಿಲ್ಲೆಯ ಬಿಡ್ನಾಳ ಬಳಿ ನಡೆದಿದೆ. ಶಿವಾನಂದ ಪೂಜಾರ ಎಂಬುವರ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಸ್ ಕಂಡಕ್ಟರ್ ಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ದಿನ ಜಿಲ್ಲೆಯಲ್ಲಿ ಚಾಲಕರ ಮೇಲಿನ ಹಲ್ಲೆ ಸಂಬಂಧ ಎರಡು ಪ್ರಕರಣ ದಾಖಲಾಗಿವೆ. ಈ ಸಂಬಂಧ ಠಕ್ಕನಗೌಡ ಪಾಟೀಲ, ಅಣ್ಣಪ್ಪ, ಮಾರುತಿ ಹಳ್ಳಿಕೇರಿ ಎಂಬುವರ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.