ಕರ್ನಾಟಕ

ಪತಿ ಪತ್ನಿ ಕಲಹ : ನೇಣು ಬಿಗಿದುಕೊಂಡು ಗೃಹಿಣಿ ಸೂಸೈಡ್​​..!

ಮೈಸೂರಿನ ಹಳೆ ಕೆಸರಿಯಲ್ಲಿ ನಡೆದ ಗಂಡ ಹೆಂಡ್ತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿ ಮಧ್ಯೆ ಗಲಾಟೆ ಶುರುವಾಗಿದ್ದು, ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೈಸೂರು : ಗಂಡ ಹೆಂಡ್ತಿ ಜಗಳ ಅಂದ್ರೆ ಉಂಡು ಮಲಗೋತನಕ ಅನ್ನೋ ಗಾದೆ ಮಾತು ಇದೆ. ಆದ್ರೆ ಮೈಸೂರಿನ ಹಳೆ ಕೆಸರಿಯಲ್ಲಿ ನಡೆದ ಗಂಡ ಹೆಂಡ್ತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿ ಮಧ್ಯೆ ಗಲಾಟೆ ಶುರುವಾಗಿದ್ದು, ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಗೃಹಿಣಿಯಾಗಿದ್ದ ಕೋಮಲ ಎರಡು ವರ್ಷದ ಹಿಂದೆ ಪ್ರೀತಿಸಿ ರಾಜು ಎಂಬಾತನೊಂದಿಗೆ ವಿವಾಹವಾಗಿದ್ರು. 8 ತಿಂಗಳ ಹಿಂದೆಯಷ್ಟೇ ಹಳೆ ಕೆಸರೆಯಲ್ಲಿ ಬಾಡಿಗೆಗೆ ಮನೆ ಪಡೆದು ದಂಪತಿ ವಾಸವಿದ್ರು. ಆದ್ರೆ, ತಡರಾತ್ರಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದ್ದು, ಮನನೊಂದು ಕೋಮಲ ನೇಣಿಗೆ ಕೊರಳೊಡ್ಡಿದ್ದಾಳೆ. ಘಟನಾ ಸ್ಥಳಕ್ಕೆ NR ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.