ಬೆಂಗಳೂರು : ಅಮೆರಿಕದಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆದು ತವರಿಗೆ ವಾಪಸ್ ಆಗಿರುವ ನಟ ಶಿವರಾಜ್ ಕುಮಾರ್ ಮಾಧ್ಯಮದವರ ಜೊತೆ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ಅಮೆರಿಕಗೆ ಹೊರಡಬೇಕಾದ್ರೆ ತುಂಬಾ ಭಯ ಆಗಿತ್ತು. ತುಂಬಾ ರಿಸ್ಕಿ ಆಪರೇಷನ್.. ಆದ್ರೆ ಏನೇ ಇದ್ರೂ ಧೈರ್ಯವಾಗಿ ಎದುರಿಸಲೇ ಬೇಕು. ಫ್ಯಾಮಿಲಿಯಲ್ಲಿ ಎಲ್ಲರ ಸಪೋರ್ಟ್ ಹಾಗೂ ಅಭಿಮಾನಿಗಳ ಆಶೀರ್ವಾದದಿಂದ ನಾನು ಹುಷಾರಾಗಿ ಬಂದಿದ್ದೇನೆ ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದರು.
ಆಪರೇಷನ್ ಆಗೋವರೆಗೂ ಏನು ಮಾಡಬೇಕು ಅದೆಲ್ಲ ಮಾಡಿದ್ದೇನೆ. ಹೋಗಬೇಕಾದರೆ 21 ಗಂಟೆ ನಾನು ಜರ್ನಿಮಾಡ್ದೆ. ಅಮೆರಿಕದಲ್ಲಿ ಹಾಸ್ಪಿಟಲ್ ನೋಡಿದ ಮೇಲೆ ನನಗೆ ಧೈರ್ಯ ಬಂತು. ಅಪರೇಷನ್ ದಿನ ಒಂದು ಸರ್ಕಸ್ ತರ ಆಯ್ತು. ಎಲ್ಲರ ಆರೈಕೆ ಅಭಿಮಾನಿಗಳ ಹಾರೈಕೆ. ಇಂಡಸ್ಟ್ರಿಯ ಹಾರೈಕೆಯಿಂದ ನಾನು ವಾಪಸ್ ಬಂದಿದ್ದೇನೆ ಎಂದು ಪ್ರತಿಯೊಬ್ಬರಿಗೂ ಶಿವಣ್ಣ ಧನ್ಯವಾದವನ್ನ ಅರ್ಪಿಸಿದ್ದಾರೆ.
ಇನ್ನೂ ಪತ್ನಿ ಗೀತಾ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ನಾನು ಗೀತಾ ಬಗ್ಗೆ ಏನ್ ಹೇಳಲಿ... ನನಗೆ ತಾಯಿಗಿಂತ ಹೆಚ್ಚು ಗೀತಾ... ಈ ಬಾರಿ ಮಗಳು ಸೇರಿಕೊಂಡಿದ್ದಾಳೆ. ಅಮೆರಿಕಾದಲ್ಲಿ ನನಗೆ ಎಲ್ಲರೂ ಸಪೋರ್ಟ್ ಮಾಡಿದ್ರು. ಅವರ ಧೈರ್ಯ ನೋಡಿ ನಾನು ಕೆಲಸ ಮಾಡಬಹುದು. ಆದ್ರೆ ಸಂಪೂರ್ಣವಾಗಿ ಆ್ಯಕ್ಷನ್ ಸೀನ್ ಗಳಲ್ಲಿ ನಾನು ಕಾಣಿಸಿಕೊಳ್ಳುಂತಿಲ್ಲ. ಮಾರ್ಚ್ ನಂತ್ರ ನಾನು ಆ್ಯಕ್ಷನ್ ಸೀನ್ ಮಾಡಬಹುದು. ಧೈರ್ಯ ಕೊಡೋರು ಜೊತೆಯಲ್ಲಿ ಇದ್ರೆ ಯಾವ ಸಮಸ್ಯೆಯಯನ್ನು ಗೆದ್ದು ಬರಬಹುದು. ನಿಮ್ಮ ದೈರ್ಯಕ್ಕೆ ನಾನು ಮೆಚ್ಚಿದ್ದೇನೆ ಅಂತ ಡಾಕ್ಟರ್ ಹೇಳಿದ್ರು. ಇನ್ನೂ ಆರು ಸರ್ಜರಿಯನ್ನು ಒಂದೆ ಬಾರಿ ಮಾಡಿದ್ದು, ಹೊಲಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ. ಡಾಕ್ಟರ್ ಜೊತೆ ಮಾತ್ನಾಡಿದ ಮೇಲೆ ನನಗೆ ತಂಬಾ ನಂಬಿಕೆ ಬಂತು. ನಮ್ಮ ಕನ್ನಡದ ಡಾಕ್ಟರ್ ಕೊಟ್ಟ ಭರವಸೆ, ಅಭಿಮಾನಿಗಳ ಪ್ರಾರ್ಥನೆಯಿಂದ ಇಂದು ಹುಷಾರಾಗಿ ಬಂದಿದ್ದೇನೆ ಎಂದು ಶಿವಣ್ಣ ತಿಳಿಕಸಿದರು.