ಸೆಲೆಬ್ರಿಟಿಗಳ ವಿಚಾರದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಛೇದನ, ಡೇಟಿಂಗ್ ಅನ್ನೋದು ಎಲ್ಲಾ ಕಾಮನ್.. ಯಾರನ್ನು ಮದುವೆಯಾಗುತ್ತಾರೆ, ಯಾವಾಗ ಬ್ರೇಕಪ್ ಮಾಡಿಕೊಳ್ಳುತ್ತಾರೆ ಅಂತಾ ಹೇಳೋದೇ ಕಷ್ಟ. ಕೆಲ ಸೆಲೆಬ್ರಿಟಿಗಳು ಈಗಾಗಲೇ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದರೆ, ಇನ್ನು ಕೆಲವರು ತಾವು ದೂರವಾಗ್ತಿದ್ದೇವೆ ಎಂದು ಶಾಕ್ ಕೊಟ್ಟಿದ್ದಾರೆ. ಆದರಲ್ಲಿಯೂ ಇತ್ತೀಚೆಗೆ ಯುವಜನತೆಯಲ್ಲಿ ನಮಗೆ ಮದುವೆ ಬೇಡ ಸ್ವಾಮಿ ಅನ್ನೋ ಟ್ರೆಂಡ್ ಜೋರಾಗಿದೆ. ವಿದೇಶದಲ್ಲಿ ಮಾತ್ರವಲ್ಲ ಈಗ ಭಾರತದಲ್ಲೂ ಮದುವೆ ಮಾಡಿಕೊಳ್ಳುವ ಯುವಕ-ಯುವತಿಯರ ಸಂಖ್ಯೆ ಕಡಿಮೆ ಆಗಿದೆ. ಅಂಥದ್ರಲ್ಲಿ ಸೆಲೆಬ್ರಿಟಿಗಳ ಬದುಕಂತು ಏನು ಅಂತಾನೇ ಗೊತ್ತಾಗಲ್ಲ. ಹೀಗಿರುವಾಗಲೇ ಯಶ್ ಜೊತೆ ಸ್ಕೀನ್ ಶೇರ್ ಮಾಡಿದ್ದ ಕಿರಾತಕ ಸಿನಿಮಾದ ನಟಿ ಓವಿಯಾ, ನನಗೆ ಮದುವೆ ಬೇಡ ಎಂದಿದ್ದಾರೆ. ಅಷ್ಟೇ ಅಲ್ಲ. ಮದುವೆಯಾಗದಿದ್ದರೂ ನನಗೆ ಒಬ್ಬ ಮಗನಿದ್ದಾನೆ ಅಂತಾ ಶಾಂಕಿಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.

ಕೆರಿಯರ್ ಅಂತಾ ಕೆಲವು ಹೀರೋಯಿನ್‌ಗಳು 40 ದಾಟಿದರೂ ಮದುವೆ ಬೇಡ ಎನ್ನುತ್ತಾರೆ. ಅದರಲ್ಲಿಯೂ ಇತ್ತೀಚೆಗಷ್ಟೇ ನಟಿ ಓವಿಯಾ ಕೂಡ ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಬಹುಭಾಷಾ ನಟಿ ಓವಿಯಾ ನನಗೆ ಈಗಾಗಲೇ ಮಗುವಿದೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ.

ಇತ್ತೀಚೆಗೆ ನಟಿ ಓವಿಯಾ ನೀಡಿರುವ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಮಲಯಾಳಂ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ತ್ರಿಶೂರ್ ಮೂಲದ ನಟಿ ಓವಿಯಾ ಹೆಲೆನ್.. 2007 ರಲ್ಲಿ ಬಿಡುಗಡೆಯಾದ 'ಕಂಗಾರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಓವಿಯಾ, ರಾಕಿಂಗ್ ಸ್ಟಾರ್ ಯಶ್ ಜೊತೆಯೂ 'ಕಿರಾತಕ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್ ತಮಿಳು ಸೀಸನ್ 1ರಲ್ಲಿಯೂ ಸಖತ್ ಸದ್ದು ಮಾಡಿದ್ದರು. ಅಷ್ಟೇ ಅಲ್ಲ ಇತ್ತಿಚೆಗೆ ನಟಿ ಓವಿಯಾರದ್ದು ಎನ್ನಲಾದ ಖಾಸಗಿ ವಿಡಿಯೋ ವೈಲರ್ ಆಗಿತ್ತು.

ಇದೆಲ್ಲದರ ಮಧ್ಯೆ ಇದೀಗ ನಟಿ ಓವಿಯಾ ತಮ್ಮ ಮದುವೆ ಕುರಿತು ಮಾತನಾಡಿದ್ದಾರೆ. ನನಗೆ ಒಬ್ಬ ಮಗನಿದ್ದಾನೆ. ಹೀಗಾಗಿ ಮದುವೆ ಬೇಡ ಎಂದಿದ್ದಾರೆ. ಅಷ್ಟಕ್ಕೂ ಆ ಮಗ ಬೇರ್ಯಾರು ಅಲ್ಲ. ಅವರ ಮನೆಯ ಮುದ್ದಿನ ನಾಯಿ. ನನ್ನ ಮನೆಯ ನಾಯಿಯನ್ನೇ ಮಗುವಂತೆ ನೋಡಿಕೊಳ್ಳಲು ಇಷ್ಟಪಡುತ್ತೇನೆ. ಮದುವೆಯಾಗಿ ಮಗುವನ್ನು ಪಡೆಯೋ ಆಸೆ ನನಗಿಲ್ಲ ಎಂದು ನಟಿ ಓವಿಯಾ ಹೇಳಿದ್ದಾರೆ. ಒಟ್ಟಾರೆ.. ತನ್ನ ಬ್ಯೂಟಿಯಿಂದಲೇ ಹುಡುಗರ ನಿದ್ದೆ ಕದಿಯೋ ಈ ಹಾಟ್ ಬ್ಯೂಟಿ ಇದೀಗ ಮದ್ವೆ ಬೇಡ ಎಂದಿರೋದು ಹುಡುಗರಿಗೆ ನಿರಾಸೆ ಮಾಡಿರೋದಂತು ನಿಜ.