ಕರ್ನಾಟಕ

ನಿಮ್ಮ ಎಲ್ಲ ಪ್ರಶ್ನೆಗಳಿಗೂ ನಾಳೆಯೇ ಉತ್ತರ ಕೊಡ್ತೇನೆ : ಬಿ.ವೈ ವಿಜಯೇಂದ್ರ

ಬೆಂಗಳೂರಿನಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ, ಕಾಂಗ್ರೆಸ್ ನ ಗ್ಯಾರಂಟಿ ಕ್ರೈಸಿಸ್, ರಾಜಕೀಯ ಕ್ರೈಸಿಸ್ ಗಳ ಬಗ್ಗೆ ನಾಳೆ ಮಾತಾಡ್ತೇನೆ. 20ರೊಳಗೆ ಎಲ್ಲ ಸಮಸ್ಯೆಗಳೂ ಸರಿಯಾಗಲಿದೆ ಎಂಬ ತಮ್ಮ ಹೇಳಿಕೆಗೆ ವಿಜಯೇಂದ್ರ ಸ್ಪಷ್ಟನೆ ನೀಡುತ್ತೇನೆ.

ಅನ್ನಭಾಗ್ಯ ಹಣ, ಗೃಹ ಲಕ್ಷ್ಮಿ ನಿಧಿ ವಿಳಂಬ ವಿಚಾರವಾಗಿ ನಾಳೆ (ಬುಧವಾರ)  ಸುದ್ದಿಗೋಷ್ಟಿ ನಡೆಸ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ, ಕಾಂಗ್ರೆಸ್ ನ ಗ್ಯಾರಂಟಿ ಕ್ರೈಸಿಸ್, ರಾಜಕೀಯ ಕ್ರೈಸಿಸ್ ಗಳ ಬಗ್ಗೆ ನಾಳೆ ಮಾತಾಡ್ತೇನೆ. 20ರೊಳಗೆ ಎಲ್ಲ ಸಮಸ್ಯೆಗಳೂ ಸರಿಯಾಗಲಿದೆ ಎಂಬ ತಮ್ಮ ಹೇಳಿಕೆಗೆ ವಿಜಯೇಂದ್ರ ಸ್ಪಷ್ಟನೆ ನೀಡುತ್ತೇನೆ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ನಾಳೆಯೇ ಉತ್ತರ ಕೊಡ್ತೇನೆ. ರಾಜಕೀಯ ವಿಚಾರವೂ ನಾಳೆಯೇ ಮಾತಾಡ್ತೇನೆ ಎಂದು ತಿಳಿಸಿದ್ದಾರೆ. 

ಇದೇ 20ರಂದು ಯತ್ನಾಳ್ ತಂಡದಿಂದ ಮತ್ತೆ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಯತ್ನಾಳ್ ಅವರು ಹಿರಿಯರಿದ್ದಾರೆ. ಸಭೆ ಕರೆದು ಪಕ್ಷ ಬಲಪಡಿಸುವ ಚರ್ಚೆ ಮಾಡ್ತಾರೆ. ಅದಕ್ಕೆ ನಾನು ಯಾಕೆ ಬೇಡ ಅನ್ನಲಿ. ನಾನು ಅದರ ಬಗ್ಗೆ ತಲೆ‌ ಕೆಡಿಸಿಕೊಂಡಿಲ್ಲ. ಯಾರೇನೇ ಮಾಡಿದರೂ ಪಕ್ಷಕ್ಕೆ‌ ಪೂರಕವಾಗಿ ಮಾಡ್ತಾರೆ ಅನ್ನೋದು ನನ್ನ ಅಭಿಲಾಷೆ ಎಂದು ಭಿನ್ನರ ಸಭೆ ಬಗ್ಗೆ ವಿಜಯೇಂದ್ರ ಮಾತನಾಡಿದ್ದಾರೆ.