ಈ ಜೈಲಿನ ಬಿಲ್ಡಿಂಗ್ ನೋಡಿದ್ರೆ ಯಾರೂ ಕೂಡ ಇದನ್ನ ಕಾರಾಗೃಹ ಅಂತಾ ಹೇಳೋದೇ ಇಲ್ಲ.. ಆ ರೀತಿಯಾಗಿ ನಿರ್ಮಿಸಲಾಗಿದೆ. ಐಷಾರಾಮಿ ರೆಸಾರ್ಟ್‌ನಂತೆಯೇ ತಲೆಎತ್ತಿದೆ.. ದೊಡ್ಡದಾಗಿರುವ ಹಸಿರು ಗಾರ್ಡನ್‌ನಲ್ಲಿ ಕೈದಿಗಳು ಟೈಂ ಕಳೆಯಬಹುದು. ಜಿಮ್, ಲೈಬ್ರರಿ, ಪ್ರಾರ್ಥನೆ ಸಲ್ಲಿಸೋಕೆ ಚರ್ಚ್ ಇದೆ. ಅಲ್ಲದೇ ಕೈದಿಗಳಿಗೆ ಬೇಕಾದ ತಮ್ಮ ಅಗತ್ಯ ವಸ್ತುಗಳನ್ನು ಕಿರಾಣಿ ಅಂಗಡಿಯಿಂದ ಖರೀದಿಸಬಹುದು. ಅಷ್ಟು ಮಾತ್ರವಲ್ಲ ಪ್ರಾಣಿಗಳನ್ನು ಸಾಕಬಹುದು, ಕೃಷಿ ಕೂಡ ಮಾಡಬಹುದು. ಕೈದಿಗಳಿಗೂ ಇಷ್ಟವಾಗುವಂತ ರುಚಿಕರವಾದ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಅಬ್ಬಾ.. ಇಷ್ಟೆಲ್ಲಾ ಸೌಲಭ್ಯ ಇರೋದು ಜೈಲು ಯಾವುದಪ್ಪ ನಮ್ ದೇಶದಲ್ಲ ಇರೋದು ಅಂತಾ ಹುಡುಕಾಡ್ಬೇಡಿ. ಏಕೆ ಅಂದ್ರೆ ಇದು ಡೆನ್ಮಾರ್ಕ್‌ನ ದಕ್ಷಿಣ ಭಾಗದಲ್ಲಿರುವ ಸ್ಟೋರ್‌ಸ್ಟ್ರಾಮ್ ಜೈಲು.

ಭಾರತದಲ್ಲಿ ಜೈಲುವಾಸವೆಂದರೆ ಎಂಥವರ ಎದೆ ನಡುಗುತ್ತೆ. ಕಂಬಿನ ಹಿಂದಿನ ವಾಸ ಯಾರಿಗೂ ಬೇಡಪ್ಪಾ ಅಂತಾರೆ. ಆದ್ರೆ ಇದಕ್ಕೆ ಯುರೋಪಿಯನ್ ಜೈಲುಗಳು ಮಾತ್ರ ಕಂಪ್ಲೀಟ್ ಚೇಂಜ್. ಯಾವ ಫೈವ್ ಸ್ಟಾರ್ ಹೋಟೆಲ್‌ಗೂ ಕಮ್ಮಿ ಇಲ್ಲ ಎನ್ನುವಂತೆ ಇವೆ. ಅಪರಾಧ ಕೃತ್ಯ ಎಸಗಿ ಬರೋರಿಗೆ ಐಷಾರಾಮಿ ಹೋಟೆಲ್‌ನತಿಂದೆ ಡೆನ್ಮಾರ್ಕ್‌ನ ದಕ್ಷಿಣ ಭಾಗದಲ್ಲಿರುವ ಸ್ಟೋರ್‌ಸ್ಟ್ರಾಮ್ ಜೈಲು.

250 ಖೈದಿಗಳಿಗಾಗಿ ಡೆನ್ಮಾರ್ಕ್‌ನ ಸ್ಟೋರ್‌ಸ್ಟ್ರಾಮ್ ಕಾರಾಗೃಹವನ್ನು ವಿನ್ಯಾಸಗೊಳಿಸಲಾಗಿದೆ. 18 ಫುಟ್‌ಬಾಲ್ ಸ್ಟೇಡಿಯಂನಷ್ಟು ಇದು ದೊಡ್ಡದಾಗಿದೆ. ಫೈವ್‌ಸ್ಟಾರ್ ಹೋಟೆಲ್ ಟ್ರೀಟ್ಮೆಂಟ್ ಸಿಗೋ ಜೈಲಲ್ಲಿ ಕೈದಿಗಳು ಮೀನುಗಾರಿಕೆ ಮಾಡಬಹುದು, ಕುದುರೆ ಸವಾರಿ, ಟೆನಿಸ್ ಆಡೋದಕ್ಕೂ ಮೈದಾನ ಇದೆ. ಕೈದಿಗಳಿಗೆ ಐಷಾರಾಮಿ ರೂಮ್‌ಗಳನ್ನ ನೀಡಲಾಗುತ್ತೆ. ಎಲ್ಲರಿಗೂ ಪ್ರತ್ಯೇಕ ರೂಮ್ ಮತ್ತು ಅಡುಗೆ ಕೋಣೆ ನೀಡಲಾಗಿದೆ. ತಮಗೆ ಬೇಕಾದ ರೀತಿ ಅಡುಗಡ ಮಾಡ್ಕೋಳೋದಕ್ಕೂ ಅವಕಾಶ ನೀಡಲಾಗಿದೆ.

ಫಾಲ್ಟರ್ ದ್ವೀಪದಲ್ಲಿರುವ ಸ್ಟೋರ್‌ಸ್ಟ್ರಾಮ್ ಜೈಲನ್ನ ಆರ್ಕಿಟೆಕ್ಚರ್ ಸಿ.ಎಫ್. ಮೊಲ್ಲರ್ ವಿನ್ಯಾಸಗೊಳಿಸಿದ್ದಾರೆ. 2012ರಿಂದ ಆರಂಭಗೊಂಡಿದ್ದ ಕೆಲಸ ಕಳೆದ ವರ್ಷ ಮುಗಿದಿದೆ. ಕಠಿಣ ಜೀವನ ಪರಿಸ್ಥಿತಿಗಳಿಗಿಂತ ಫುಲ್ ರಿಲ್ಯಾಕ್ಸ್ ಆಗಿ ಜೀವನ ಕಳೆಯಲು ಕೈದಿಗಳಿಗೆ ಜೈಲನ್ನ ವಿನ್ಯಾಸಗೊಳಿಸಲಾಗಿದೆ.

ವರದಿಗಳ ಪ್ರಕಾರ, ಕೊಲೆ, ಅತ್ಯಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆಯಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಯಾನಕ ಅಪರಾಧಿಗಳನ್ನು ಅಂತಹ ಜೈಲುಗಳಲ್ಲಿ ಇರಿಸಲಾಗುತ್ತದೆ. ಆದ್ರೆ ಈ ಜೈಲಿನಲ್ಲಿ ಎತ್ತರದ ಗೋಡೆಗಳಾಗಲಿ, ಶಸ್ತ್ರಸಜ್ಜಿತ ಕಾವಲುಗಾರರಾಗಲಿ ಇಲ್ಲ. ಕೈದಿಗಳು ಪರಾರಿಯಾಗುವ ಘಟನೆಗಳು ಇಲ್ಲಿ ಬಹಳ ವಿರಳ. ಯಾರಾದರೂ ಜೈಲಿನಿಂದ ಒಮ್ಮೆ ತಪ್ಪಿಸಿಕೊಂಡರೆ, ಅವರು ಮತ್ತೆ ಈ ಜೈಲಿಗೆ ಬರೋದಕ್ಕೆ ಬಿಡೋದಿಲ್ಲ. ತಪ್ಪು ಮಾಡಿ ಜೈಲಿಗೆ ಹೋದವರುಪಡಬಾರದ ಕಷ್ಟ ಅನುಭವಿಸ್ತಾರೆ ಅನ್ನೋದಕ್ಕೆ ಈ ಜೈಲು ಮಾತ್ರ ಸೇರೋದಿಲ್ಲ. ಈ ಕಾರಾಗೃಹ ಸೇರಿದ್ರೆ ಎಲ್ಲವೂ ಜಾಲಿ.. ಜಾಲಿ..