ಬೆಳಗಾವಿ : ನೀವೆಲ್ಲಾ ಗಟ್ಟಿಯಾಗಿ. ಕರ್ನಾಟಕದಲ್ಲಿ ಹೊಸ ಅಧ್ಯಾಯ ಪ್ರಾರಂಭ ಮಾಡುತ್ತಿದ್ದೇವೆ. ನಾನು ಸಿಎಂ ಆದ್ರೆ ಪೊಲೀಸರ ಕೈಯಲ್ಲಿ AK47 ಗನ್ ಕೊಡ್ತೀನಿ ಎಂದು ಶಾಸಕ ಬಸನಗೌ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಮಾತನಾಡಿದ ಯತ್ನಾಳ್, ಎಲ್ಲಾ ಹಿಂದೂಗಳು ಈಗ ಒಂದಾಗಬೇಕು. ಸಿದ್ದರಾಮಯ್ಯ ಅವರನ್ನ ನಾವು ನೋಡಿದ್ವಿ.ಅವರು ಕುಂಕುಮ ಹಚ್ಚಿಕೊಳ್ಳಲು ಹಿಂದೇಟು ಹಾಕ್ತಾರೆ. ಪೇಟಾ ತಂದ್ರೆ ಕಿತ್ತು ಹಾಕ್ತಾರೆ. ಇವಾಗ ಯಾಕೇ ಚಾಮುಂಡಿ ದರ್ಶನಕ್ಕೆ ಹೋಗ್ತಿದ್ದಿರಿ ಸಿದ್ದರಾಮಣ್ಣನ್ನವರೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹಿಂದೂ ದೇವಸ್ಥಾನದಲ್ಲಿ ಆಶೀರ್ವಾದ ಪಡೆಯೋದು. ಸಾಬರ ಕೆಲಸ ಮಾಡೋದು ಮಾಡ್ತಿದ್ದಾರೆ. SC-ST ಜನಾಂಗದವರ 14 ಸಾವಿರ ಕೋಟಿ, ವಾಲ್ಮೀಕಿ ಸಮುದಾಯದ ಹಣ ನುಂಗಿ ನೀರು ಕುಡಿದ್ರಿ. ಹಾಲುಮತದ ಸಮಾಜಕ್ಕೆ ಏನು ಮಾಡಲಿಲ್ಲ. ಆದ್ರೆ, ಅವರಿಗೆ 10 ಸಾವಿರ ಕೋಟಿ ಕೊಡ್ತೀವಿ ಅಂತಾರೆ.ಯಾರಪ್ಪಂದ ಮನೆಯಿಂದ ಕೊಡ್ತಿರಾ. ಟ್ಯಾಕ್ಸ್ ತುಂಬೋರು ನಾವು ಫುಗ್ಸೆಟ್ಟೆ ಹಡಿಯೋರು ಅವರು. ನಾವು ಒಂದೇ ಮದ್ವಿಯಾಗಿ ಎರಡು ಮಕ್ಕಳು ಮಾಡ್ತಿವಿ. ಇನ್ನೊಂದು ಹತ್ತು ವರ್ಷಕ್ಕೆ ನಾವು ಇಳಿತೀವಿ ಅವರ ಜನಸಂಖ್ಯೆ ಏರುತ್ತದೆ. ಮುಂದೆ ನಿಮಗ ಗೂಟಾ ಇಡ್ತಾರಾ. ನೀವು ಎರಡು ಮಕ್ಕಳು ಆದ್ಮೇಲೆ ಮಕ್ಕಳ ಆಪರೇಷನ್ ಮಾಡ್ಕೊತ್ತಾರಾ ಎಂದು ಬೆಳಗಾವಿಯಲ್ಲಿ ಶಾಸು ಯತ್ನಾಳ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.