ಬಳ್ಳಾರಿ : ಇಲ್ಲೊಂದು ದೇವಸ್ಥಾನದಲ್ಲಿ ಹಣೆಗೆ ಕುಂಕುಮವನ್ನ ಇಡದಿದ್ದರೆ ಪ್ರವೇಶವನ್ನೇ ನೀಡುವುದಿಲ್ಲ. ಹೌದು, ಹೊಸಪೇಟೆ ನಗರದ ಎಸ್.ಎಸ್.ಕೆ ಸಮಾಜದ ಜಗದಂಬಾ ದೇವಸ್ಥಾನದ ಆವರಣದ ಮುಂದೆ ಕುಂಕುಮ ಇಲ್ಲದೇ ಪ್ರವೇಶ ಇಲ್ಲ ಎಂದು ಬೋರ್ಡ್ ಹಾಕಲಾಗಿದೆ.
ಸನಾತನ ಹಿಂದೂ ಧರ್ಮದ ಜಾಗೃತಿಗಾಗಿ ದೇವಾಲಯದ ಟ್ರಸ್ಟ್ ಈ ಅಭಿಯಾನವನ್ನ ಆರಂಭಿಸಿದ್ದು, ಹಣೆಗೆ ಕುಂಕುಮವನ್ನ ಹಚ್ಚದವರಿಗೆ ದೇವಸ್ಥಾನದೊಳಗೆ ಪ್ರವೇಶವನ್ನ ಕುಡುತ್ತಿಲ್ಲ. ದೇವಸ್ಥಾನದ ಪ್ರವೇಶ ದ್ವಾರದ ಎಡ ಮತ್ತು ಬಲ ಭಾಗದಲ್ಲಿ ದೇವಸ್ಥಾನದ ಒಳಗೆ ಕುಂಕುಮವಿಲ್ಲದೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ.
ಸೋಮವಂಶ ಕ್ಷತ್ರೀಯ ಸಮಾಜದಿಂದ ಹಿಂದೂ ಧರ್ಮದ ಕುರಿತು ಜಾಗೃತಿ ಮೂಡಿಸುತ್ತಿದ್ದು,ಕುಂಕುಮ ನಮ್ಮ ಹಿಂದೂ ಧರ್ಮದ ಸಂಕೇತವೇ ತಿಲಕ, ನಮ್ಮ ಮುಂದಿನ ಪೀಳಿಗೆ ಯುವಕರಿಗೆ ಜಾಗೃತಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಟ್ರಸ್ಟ್ ಹೇಳಿದೆ. ಆದರೆ ಈ ಜಾಗೃತಿ ಕಾರ್ಯಕ್ರಮವೀಗ ಭಾರೀ ಚರ್ಚೆಗೆ ಕಾರಣವಾಗಿದೆ.