ದೇಶ

ದೇಶದ ಗಮನ ಸೇಳೆದಿದ್ದ ಐಐಟಿ ಬಾಬಾ ಪ್ರಯಾಗರಾಜ್‌ನಿಂದ ನಾಪತ್ತೆ..! ಬಾಬಾ ಹೋಗಿದ್ದೆಲ್ಲಿಗೆ?

ಜನರು ಕಿರುಕುಳ ನೀಡುತ್ತಿದ್ದಾರೆ, ಆದ್ದರಿಂದ ಅವರ ಗುರಿಯನ್ನ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಐಐಟಿ ಬಾಬಾ ಸಂಗಮ ನಗರವನ್ನ ತೊರೆದು, ನಿಗೂಢ ಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ ದೇಶದ ಗಮನವನ್ನ ಸೆಳೆದಿದ್ದ ಅಭಯ್‌ ಸಿಂಗ್‌  ಅಲಿಯಾಸ್‌ ಐಐಟಿ ಬಾಬಾ ದಿಢೀರ್‌ ನಾಪತ್ತೆಯಾಗಿದ್ದಾರೆ. ಮಾಧ್ಯಮದವರು, ಸಾರ್ವ ಜನಿಕರು, ಕುಟುಂಬಸ್ಥರು ಐಐಟಿ ಬಾಬಾ ಅವರನ್ನ ಭೇಟಿ ಮಾಡಲು ಮುಗಿಬೀಳುತ್ತಿದ್ದಂತೆ ಬಾಬಾ ತ್ರಿವೇಣಿ ಸಂಗಮ ನಗರವನ್ನೇ ತೊರೆದಿದ್ದಾರೆ.

ಇನ್ನೂ ಅಭಯ್‌ ಸಿಂಗ್‌ ಬಾಬಾ ನಾಪತ್ತೆಯಾಗಿರುವ ಬಗ್ಗೆ ಅವರ ಗುರುಗಳೇ ಸ್ವತಃ ಒಂದಿಷ್ಟು ಮಾಹಿತಿಗಳನ್ನ ನೀಡಿದ್ದಾರೆ. ಜನರು ಕಿರುಕುಳ ನೀಡುತ್ತಿದ್ದಾರೆ, ಆದ್ದರಿಂದ ಅವರ ಗುರಿಯನ್ನ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಐಐಟಿ ಬಾಬಾ ಸಂಗಮ ನಗರವನ್ನ ತೊರೆದು, ನಿಗೂಢ ಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.