ಅಮೆರಿಕದಿಂದ ಗಡಿಪಾರು ಮಾಡಲಾಗಿದ್ದ ಭಾರತೀಯ ಅಕ್ರಮ ವಲಸಿಗರು ಇಂದು ದೇಶಕ್ಕೆ ಬಂದಿಳಿದಿದ್ದಾರೆ. C-17 ಯುದ್ಧ ವಿಮಾನ ಇಂದು ಮಧ್ಯಾಹ್ನದ ವೇಳೆಗೆ ಪಂಜಾಬ್‌ನ ಅಮೃತಸರದ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಿದೆ. ಅಕ್ರಮ ಮಾರ್ಗದ ಮೂಲಕ ಅಮೆರಿಕ ಎಂಟ್ರಿ ಹಿನ್ನೆಲೆ ಕ್ರಮಕೈಗೊಳ್ಳಲಾಗಿದೆ. ಅಧಿಕಾರಕ್ಕೆ ಬರ್ತಿದ್ದಂತೆ ಅಕ್ರಮ ವಲಸಿಗರಿಗೆ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದ್ದು, ಈಗಾಗಲೇ ದಾಖಲೆ ರಹಿತ 18 ಸಾವಿರ ಭಾರತೀಯರನ್ನ ಗುರುತು ಮಾಡಲಾಗಿದೆ. ಮೊದಲ ಹಂತದಲ್ಲಿ 205 ಮಂದಿ ಭಾರತೀಯರು ಗಡಿಪಾರು ಮಾಡಲಾಗಿದೆ. ಗುಜರಾತ್, ಪಂಜಾಬ್, ಮಹಾರಾಷ್ಟ್ರ ಚಂಡೀಗಢ ಸೇರಿ ಭಾರತದ ವಿವಿಧ ಭಾಗಗಳಿಂದ ಅಮೆರಿಕಗೆ ತೆರಳಿದ್ದ ಅಕ್ರಮ ವಲಸಿಗರನ್ನ ವಾಪಸ್ ಕಳುಹಿಸಲಾಗಿದೆ. ಫೆಬ್ರವರಿ 12ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದು, ನಮೋ ಭೇಟಿಗೂ ಮುನ್ನವೇ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದ್ದಾರೆ.