ವೈರಲ್

ಅಕ್ರಮವಾಗಿ 27 ಎಮ್ಮೆಗಳ ಸಾಗಾಟ ; ನಾಲ್ವರ ಬಂಧನ..!

ಮೈಸೂರಿನ ಅಯೂಬ್ ಅಹಮದ್ ರಶೀದ್ (35), ಕೇರಳ ಕಾಸರಗೋಡಿನವರಾದ ಅಬೂಬಕ್ಕರ್ ಮಹಮ್ಮದ್ (53), ಅಬ್ದುಲ್ ರೆಹಮಾನ್ ಪಲ್ಲಿಯನ್ (60) ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರದ ಅಜಗರ್ ಹುಸೈನ್ ಇಶ್ರತ್ ಹುಸೈನ್ (32) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಮಟಾ : ಅಕ್ರಮವಾಗಿ ಲಾರಿಯೊಂದರಲ್ಲಿ 27 ಎಮ್ಮೆಗಳನ್ನು ಹಿಂಸೆ ನೀಡಿ ಸಾಗಿಸುತ್ತಿದ್ದು, ಕುಮಟಾ ಠಾಣೆ ಪೊಲೀಸರು ಪಟ್ಟಣದ ಎಪಿಎಂಸಿ ಸಮೀಪ ನಾಲ್ವರನ್ನು ಇಂದು ನಸುಕಿನ ಜಾವ ಬಂಧಿಸಿದ್ದಾರೆ. ಎಮ್ಮೆಗಳಿಗೆ ನೀರು, ಮೇವು ನೀಡದೆ ಹಿಂಸೆ ನೀಡಿ ಸಾಗಿಸುತ್ತಿದ್ದರು.

ಕುಮಟಾ | ಅಕ್ರಮ ಸಾಗಾಟ: 27 ಎಮ್ಮೆಗಳ ರಕ್ಷಣೆ, ನಾಲ್ವರ ಬಂಧನ

ಹೌದು, ಮೈಸೂರಿನ ಅಯೂಬ್ ಅಹಮದ್ ರಶೀದ್ (35), ಕೇರಳ ಕಾಸರಗೋಡಿನವರಾದ ಅಬೂಬಕ್ಕರ್ ಮಹಮ್ಮದ್ (53), ಅಬ್ದುಲ್ ರೆಹಮಾನ್ ಪಲ್ಲಿಯನ್ (60) ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರದ ಅಜಗರ್ ಹುಸೈನ್ ಇಶ್ರತ್ ಹುಸೈನ್ (32) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಹಾರಾಷ್ಟ್ರದ ಕೊಲ್ಹಾಪುರದಿಂದ ಕೇರಳದ ಪಾಲಕ್ಕಾಡ್ ಎಂಬಲ್ಲಿಗೆ ಎಮ್ಮೆಗಳನ್ನು ವಧಿಸುವ ಉದ್ದೇಶಕ್ಕೆ ಸಾಗಿಸುತ್ತಿದ್ದರು. ಈ ಶಂಕೆಯ ಮೇಲೆ ವಾಹನ ತಪಾಸಣೆ ನಡೆಸಿದಾಗ ಎಮ್ಮೆಗಳನ್ನು ಇಕ್ಕಟ್ಟಾದ ಜಾಗದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.