ವೈರಲ್

ಬೆಳಗಾವಿ! ಅಕ್ರಮವಾಗಿ ಚೀನಾಗೆ ಚಿಪ್ಪು ಹಂದಿ ಸಾಗಾಟ: ಆರೋಪಿಗಳು ಅರೆಸ್ಟ್

ಖಾನಾಪುರ ಅರಣ್ಯದಲ್ಲಿ ಚಿಪ್ಪು ಹಂದಿ ಹಿಡಿದು ಸಾಗಾಟ ಮಾಡ್ತಿದ್ದ ಗ್ಯಾಂಗ್ ಅರಣ್ಯ ಅಧಿಕಾರಿಗಳ ಕಾರ್ಯಚರಣೆಯಿಂದ ಖೆಡ್ಡಾಗೆ ಬಿಳಿಸಿದ್ದಾರೆ.

ಬೆಳಗಾವಿ : ಅಕ್ರಮವಾಗಿ ಚೀನಾಗೆ ಸಾಗಿಸುತ್ತಿದ್ದ ಚಿಪ್ಪು ಹಂದಿ ಗ್ಯಾಂಗ್ ಖೆಡ್ಡಾಗೆ ಬಿದ್ದಿದೆ. ಖಾನಾಪುರ ಉಪ ವಿಭಾಗ ಅರಣ್ಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಖಾನಾಪುರ ಅರಣ್ಯದಲ್ಲಿ ಚಿಪ್ಪು ಹಂದಿ ಹಿಡಿದು ಸಾಗಾಟ ಮಾಡ್ತಿದ್ದ ಗ್ಯಾಂಗ್ ಅರಣ್ಯ ಅಧಿಕಾರಿಗಳ ಕಾರ್ಯಚರಣೆಯಿಂದ ಖೆಡ್ಡಾಗೆ ಬಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ರೇಲ್ವೆ ನಿಲ್ದಾಣದಲ್ಲಿ ಈ ಗ್ಯಾಂಗ್ ನ್ನ ಅರಣ್ಯ ಸಂರಕ್ಷಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಖದೀಮರು ಜೀವಂತ ಚಿಪ್ಪು ಹಂದಿಯನ್ನ ಚೀಲದಲ್ಲಿ ಹಾಕಿ ಮೇಲೆ ತರಕಾರಿ ಇಟ್ಟಿದ್ದರು. ನಾಲ್ಕು ಜನ ಆರೋಪಿಗಳು ಸಂಶಯಾಸ್ಪದವಾಗಿ ರೈಲು ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾರೆ. ಸಂಶಯ ಬಂದು ಆರೋಪಿ ಹಿಡಿದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿಂದೆ. ಈ ವೇಳೆ ಜೀವಂತ ಒಂದು ಚಿಪ್ಪು ಹಂದಿ, ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.

6 ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿ, ಖಾನಾಪುರದಿಂದ ಕಾರವಾರಕ್ಕೆ ಅಲ್ಲಿಂದ ಬೋಟ್ ಮೂಲಕ ಕಲ್ಕತ್ತಾ ಸಾಗಿಸುತ್ತಿದ್ದರು. ಬಳಿಕ ಈ ಕತರ್ನಾಕ್ ಗ್ಯಾಂಗ್ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ‌ ಅರಣ್ಯ ಇಲಾಖೆ ಚಿಪ್ಪು ಹಂದಿ ಸಾಗಾಟ ರಾಕೆಟ್ ಬೆನ್ನು ಬಿದ್ದಿದ್ದಾರೆ. ಒಂದು ಪ್ರತ್ಯೇಕ ತಂಡ ರಚನೆ ಮಾಡಿ ಸ್ಮಗ್ಲಿಮ್ ಟೀಮ್ ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದೆ ಎಂದು ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಹೇಳಿದ್ದಾರೆ.