ಕರ್ನಾಟಕ

ಪತ್ನಿ ಜೊತೆ ಅನೈತಿಕ ಸಂಬಂಧ : ಮದ್ಯ ಕುಡಿಸಿ ವ್ಯಕ್ತಿಯ ಭೀಕರ ಹತ್ಯೆ.!

ಕಿರಣ್ ಎಂಬಾತ ಕೃಷ್ಣಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಕೃಷ್ಣಪ್ಪ, ಕಿರಣ್ನನ್ನು ಕರೆದು ಬೈದು ವಾರ್ನಿಂಗ್ ಸಹ ಮಾಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ವೇಳೆ ಸತ್ಯ ಬಯಲಾಗಿದ್ದು,

ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ನಾಗೀಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊರ್ವನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ನದಿಗೆ ಎಸೆದಿರುವ ಘಟನೆಯೊಂದು ನಡೆದಿದೆ. ಕೃಷ್ಣಪ್ಪ(33) ಎಂಬುವವರು ಕೊಲೆಯಾದ ದುರ್ದೈವಿಯಾಗಿದ್ದಾರೆ.

ಪಾರ್ಕ್ ನಲ್ಲಿ ದುಷ್ಕರ್ಮಿಗಳಿಂದ ಜೋಡಿ ಕೊಲೆ. - Just Kannada | Online Kannada News  | Breaking Kannada News | Karnataka News | Live Updates | ಕನ್ನಡ ನ್ಯೂಸ್ |  ಜಸ್ಟ್ ಕನ್ನಡ

ಕೃಷ್ಣಪ್ಪನನ್ನ ಮದ್ಯ ಕುಡಿಸಿ, ಕಂದ್ಲಿ, ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನ ಬಳಸಿ, ಕತ್ತರಿಸಿ ಕೊಲೆ ಮಾಡಿ ಬಳಿಕ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ಅಂಗಾಂಗಗಳನ್ನ ತುಂಬಿಕೊಂಡು ಬಳಿಕ ಶವ ಚೀಲವನ್ನ ಹಿಡಿದು ಕೊರಟೆಗೆರೆ, ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿಯ ನದಿಯಲ್ಲಿ ಶವದ ತುಂಡುಗಳನ್ನು ಬಿಸಾಡಿ, ಕಿರಣ್ & ಆತನ ಸ್ನೇಹಿತರಾದ ಗಣೇಶ್, ಪ್ರತಾಪ್ ಎಸ್ಕೇಪ್‌ ಆಗಿದ್ದಾರೆ.

ಹೌದು, ಕಿರಣ್ ಎಂಬಾತ ಕೃಷ್ಣಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಕೃಷ್ಣಪ್ಪ, ಕಿರಣ್ನನ್ನು ಕರೆದು ಬೈದು ವಾರ್ನಿಂಗ್ ಸಹ ಮಾಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ವೇಳೆ ಸತ್ಯ ಬಯಲಾಗಿದ್ದು,

ಸದ್ಯ, ಪೊಲೀಸರು ಆರೋಪಿಗಳನ್ನು ಬಂಧಿಸಿ, ಎಫ್ ಐಆರ್ ದಾಖಲಿಸಿದ್ದಾರೆ. ಸದ್ಯ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.