ವೈರಲ್

ಅನೈತಿಕ ಸಂಬಂಧ : ಕೊಲೆ ಯತ್ನ, ಏನಿದು ಪೊಲೀಸಪ್ಪನ ಪರಸಂಗದ ಕಥೆ

ನವೆಂಬರ್ ನಲ್ಲಿ ಪೊಲೀಸ್ ಪೇದೆ ಕೊಟ್ರೇಶ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಉತ್ತರ ಕರ್ನಾಟಕ ಮೂಲದ ಕೊಟ್ರೇಶ್ ಶನಿವಾರ ಸಂತೆ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದು, ಶನಿವಾರ ಸಂತೆಯಲ್ಲಿ ವಾಸವಿದ್ದ ಪೇದೆ ಕೊಟ್ರೇಶ್ ಗೆ ಪಕ್ಕದ ಮನೆಯ ಆಯಿಷಾಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿ ಪತಿ ಇಫ್ರಾಜ್ ಕೊಲೆಗೆ ಯತ್ನ ಮಾಡಿದ್ದಾರೆ.

ಕೊಡಗು : ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ, ಪ್ರೇಯಸಿ ಪತಿ ಕೊಲೆಗೆ ಯತ್ನ ಮಾಡಿ ಸಿಕ್ಕಿಬಿದ್ದ ಪೊಲೀಸ್ ಪೇದೆ ಪೋಲಿಸರ ಅಥಿತಿಯಾಗಿದ್ಧಾನೆ. ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಪೇದೆ ಕೊಟ್ರೇಶ್ (30) ಕೊಲೆಗೆ ಯತ್ನಿಸಿದವರಾಗಿದ್ದಾರೆ. ಕೊಲೆಗೆ ಕುಮ್ಮಕ್ಕು ನೀಡಿದ ಕೊಟ್ರೇಶ್ ಪ್ರಿಯತಮೆ ಆಯಿಷಾ(29) ಕೂಡ ಬಂಧನವಾಗಿದೆ.

ನವೆಂಬರ್ ನಲ್ಲಿ ಪೊಲೀಸ್ ಪೇದೆ ಕೊಟ್ರೇಶ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಉತ್ತರ ಕರ್ನಾಟಕ ಮೂಲದ ಕೊಟ್ರೇಶ್ ಶನಿವಾರ ಸಂತೆ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದು, ಶನಿವಾರ ಸಂತೆಯಲ್ಲಿ ವಾಸವಿದ್ದ ಪೇದೆ ಕೊಟ್ರೇಶ್ ಗೆ ಪಕ್ಕದ ಮನೆಯ ಆಯಿಷಾಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿ ಪತಿ ಇಫ್ರಾಜ್ ಕೊಲೆಗೆ ಯತ್ನ ಮಾಡಿದ್ದಾರೆ.

ಮಂಗಳವಾರ ರಾತ್ರಿ ಮಲಗಿದ್ದ ಇಫ್ರಾಜ್ ಗೆ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದಾರೆ. ಇದೇ ವೇಳೆ ಇಫ್ರಾಜ್ ಜೋರಾಗಿ ಕೂಗಿಕೊಂಡಿದ್ದಾರೆ. ಕಿರುಚಾಟ ಕೇಳಿ  ಪಕ್ಕದ ರೂಮ್ ನಲ್ಲಿದ್ದ ಇಫ್ರಾಜ್ ಸಂಬಂಧಿಕರು ಓಡಿ ಬಂದಿದ್ದಾರೆ. ಘಟನೆಯಿಂದ ಸ್ಥಳದಿಂದ ಪೇದೆ ಎಸ್ಕೇಪ್ ಆಗಿದ್ದಾನೆ. ಬಳಿಕ ಇಫ್ರಾಜ್ ನಿಂದ ದೂರು ದಾಖಲಾಗಿದೆ. ದೂರು ಹಿನ್ನೆಲೆ ಶನಿವಾರಸಂತೆ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನ‌ವಾಗಿದೆ.