ಕರ್ನಾಟಕ

ನಶೆ ಏರುವ ಮಾತ್ರೆ ಮಾರಾಟ..ಆರೋಪಿಗಳು ಖಾಕಿ ಕೈಗೆ ಲಾಕ್..!

ಬಂಧಿತರಿಂದ 56 ಸಾವಿರ ಬೆಲೆ ಬಾಳುವ 1700 ನಶೆ ಮಾತ್ರೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್ ನ ವಶಕ್ಕೆ ಪಡೆಯಲಾಗಿದೆ.

ತುಮಕೂರಿನ ತಿಲಕ್ ಪಾರ್ಕ್ ಪೊಲೀಸರ ಕಾರ್ಯಾಚರಣೆಯಲ್ಲಿ ನಶೆ ಏರಿಸುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಮೆಡಿಕಲ್ ಮಾಲೀಕ ಸೇರಿ ಇಬ್ಬರು ಡ್ರಗ್ಸ್ ದಂಧೆಕೋರರನ್ನು ಬಂಧಿಸಿದ್ದು, ಬಂಧಿತರನ್ನು ಅಬ್ದುಲ್ ಖಾದರ್ ಹಾಗೂ ಬೀರೇಶ್ ಎಂದು ಗುರುತಿಸಲಾಗಿದೆ. 

ಬಂಧಿತರಿಂದ 56 ಸಾವಿರ ಬೆಲೆ ಬಾಳುವ 1700 ನಶೆ ಮಾತ್ರೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್ ನ ವಶಕ್ಕೆ ಪಡೆಯಲಾಗಿದೆ. ತುಮಕೂರು ನಗರದ ಮೆಳೇಕೋಟೆ ಮುಖ್ಯ ರಸ್ತೆಯಲ್ಲಿ ಎ.ಎನ್ ಮೆಡಿಕಲ್ ನಡೆಸುತ್ತಿದ್ದ ಅಬ್ದುಲ್ ಖಾದರ್, ಅಕ್ರಮವಾಗಿ ಹಣ ಗಳಿಸಲು ತನ್ನ ಸಹಚರನ ಜೊತೆ ಸೇರಿ ಈ ಕೃತ್ಯದಲ್ಲಿ ಕೈ ಹಾಕಿದ್ದ. ತುಮಕೂರು ನಗರದ ವಿವಿಧೆಡೆ ನಶೆ ಏರಿಸುವ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದ.ಸದ್ಯ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಆಕ್ಟ್ ಅಡಿ ದೂರು ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.