ಕರ್ನಾಟಕ

ಚನ್ನಪಟ್ಟಣದಲ್ಲಿ ಸಿಪಿವೈ ಗೆ ಮಗಳೇ ವಿಲನ್ - ನಿಖಿಲ್ ಗೆ ತಂದೆ ತಾಯಿ ವಿಲನ್

ಕಳೆದ ಎರಡು ಅವಧಿಗಳ ವಿಧಾನ ಸಭಾ ಚುನಾವಣೆ ಯಲ್ಲಿ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಗೆದ್ದು ಬಳಿಕ ಉಪಚುನಾವಣೆ ಅನಿವಾರ್ಯ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ.

ಚನ್ನಪಟ್ಟಣ :  ವಿಧಾನ ಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಬೈ ಎಲೆಕ್ಷನ ಕಾವು ದಿನೇ ದಿನೇ ದುಪ್ಪಟ್ಟು ಆಗ್ತಿದೆ. ಈ ನಡುವೆ ಒಬ್ಬೊಬ್ಬ ಅಭ್ಯರ್ಥಿಗೆ ಒಂದೊಂದು ಸಮಸ್ಯೆ ಶುರುವಾಗಿದೆ.ನಿಖಿಲ್ ಗೆ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಸಮಸ್ಯೆಯಾದ್ರೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗಿಶ್ವರ್ ಗೆ ತಮ್ಮ ಪುತ್ರಿ ನಿಶಾ ಸಿಪಿ ಯೋಗಿಶ್ವರ್ ವಿಲನ್ ಆಗಿ ಕಾಣುತ್ತಿದ್ದಾರೆ. ಹೇಗೆ ಅಂತೀರಾ ನೋಡಿ ಸಮಯ ಸ್ಪೆಷಲ್ ಸ್ಟೋರಿ.

With candidate ready for Channapatna bypoll, Congress leaves door ajar for C  P Yogeshwar

ಕಳೆದ ಎರಡು ಅವಧಿಗಳ ವಿಧಾನ ಸಭಾ ಚುನಾವಣೆ ಯಲ್ಲಿ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಗೆದ್ದು ಬಳಿಕ ಉಪಚುನಾವಣೆ ಅನಿವಾರ್ಯ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ. ಇದರ ಬಗ್ಗೆ ಎಚ್ಡಿಕೆ ವಿರುದ್ಧ ಸಹಜವಾಗಿ ಕ್ಷೇತ್ರದ ಜನರಿಗೆ ಅಸಮಾಧಾನವೂ ಇದೆ.ಕ್ಷೇತ್ರ ಅಭಿವೃದ್ಧಿ ಅಂತೂ ಆಗಿಲ್ಲ ಆದ್ರೆ ಇವರ ಕುಟುಂಬದ ಉದ್ಧಾರಕ್ಕಾಗಿ ಎರಡೇರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಬಳಿಕ ಉಪಚುನಾವಣೆಯಲ್ಲೂ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಿ ಕ್ಷೇತ್ರ ಉಳಿಸಿಕೊಳ್ಳುವ ಸರ್ಕಸ್ ಮಾಡೋದು ಅನ್ನೋ ಗೊಣಗಾಟ ಶುರುವಾಗಿದೆ.

2013ರ ಚನ್ನಪಟ್ಟಣ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ 2009ರ ಮಧುಗಿರಿ ಬೈ ಎಲೆಕ್ಷನ್ ಲ್ಲಿ ಗೆದ್ದು ಚೊಚ್ಚಲ ಬಾರಿಗೆ ವಿಧಾನ ಸಭೆ ಪ್ರವೇಶ ಮಾಡಿದ್ದ ಅನಿತಾ ಕುಮಾರಸ್ವಾಮಿ ಬಳಿಕ ಅತ್ತ ತಿರುಗಿಯೋ ನೋಡದೇ ಬಳಿಕ ಬಂದ ಸಾರ್ವತ್ರಿಕ ಚುನಾವಣೆಯಲ್ಲಿ ಚನ್ನಪಟ್ಟಣಕ್ಕೆ ಹಾರಿದ್ರು. ಆದ್ರೆ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಮಾಡಿದ ಕೆಲಸ ಅರಿತಿದ್ದ ಸಿಪಿ ಯೋಗಿಶ್ವರ್ ಅಲ್ಲಿನ‌ ಜನರು ಅನಿತಾ ಕುಮಾರಸ್ವಾಮಿ ಬಗ್ಗೆ ಏನ್ ಹೇಳ್ತಾರೆ ಅನ್ನೋದನ್ನೇ ಹೇಳಿ ಚುನಾವಣೆ ಗೆದ್ದು ಬಿಟ್ರು ಅಲ್ಲದೇ ಮುಂದೆ ಕುಮಾರಸ್ವಾಮಿ ಬರಲಿ ಅವರನ್ನು ಸಹ ಸೋಲಿಸಿ ಮನೆಗೆ ಕಳಿಸುತ್ತೇನೆ ಅಂತ ಸಿಪಿ ಯೋಗಿಶ್ವರ್ ನಾಲಿಗೆ ಹರಿಬಿಟ್ಟಿದ್ರು.

ಈ ಸೂಕ್ಷ್ಮತೆ ಅರಿತ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ 2018ರ ಚುನಾವಣೆಯಲ್ಲಿ ರಾಮನಗರದ ಜತೆಗೆ ಚನ್ನಪಟ್ಟಣದಲ್ಲೂ ಸ್ಪರ್ಧೆ ಮಾಡಿ ಎರಡು ಕ್ಷೇತ್ರಗಳಲ್ಲಿ ಗೆದ್ದು ಸಿ.ಪಿ ಯೋಗಿಶ್ವರ್ ಅವರನ್ನ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ರು.ಬಳಿಕ ನಡೆದ ಉಪಚುನಾವಣೆಯಲ್ಲಿ ಚನ್ನಪಟ್ಟಣ ಉಳಿಸಿಕೊಂಡು ರಾಮನಗರ ಬೈ ಎಲೆಕ್ಷನ್ ಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನ ಸ್ಪರ್ಧೆ ಮಾಡಿಸಿ ಎರಡು ಕ್ಷೇತ್ರ ಉಳಿಸಿಕೊಂಡು ಸಿಎಂ ಸಹ ಆದ್ರೂ.ಆದ್ರೆ ಕುಟುಂಬಕ್ಕೆ ಆದ ಲಾಭ ಕ್ಷೇತ್ರಕ್ಕೆ ಆಗಲಿಲ್ಲ ಅನ್ನೋ ಕೊರಗು ಜನರ ಮನಸ್ಸಿನಲ್ಲಿ ನಿಂತು ಹೋಯಿತು.
 
2023 ರಲ್ಲೂ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ನಿಂತು ಗೆದ್ರು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಡಿಕೆ ಸಹೋದರರು ಹೆಣೆದ ತಂತ್ರಕ್ಕೆ ಸೋತು ಮನೆ ಸೇರಿದ್ರು ಈ ನಡುವೆ ಬಂದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಗೆದ್ದು ಮತ್ತೆ ರಾಮನಗರಕ್ಕೆ ಉಪಚುನಾವಣೆ ಅನಿವಾರ್ಯ ಆಗುವಂತೆ ಮಾಡಿದ್ರು ಈ ಬಗ್ಗೆ ಸಹ ಈಗ ಕ್ಷೇತ್ರದಲ್ಲಿ ಚರ್ಚೆ ಶುರುವಾಗಿದೆ ಕಳೆದ ಎರಡು ಅವಧಿಗಳಿಂದ ಕ್ಷೇತ್ರ ಇವರ ಕೈಯಲ್ಲಿ ಇದ್ರೂ ಏನು ಅಭಿವೃದ್ಧಿ ಆಗಲಿಲ್ಲ ಇಂದಿಗೂ ಸಿಪಿ ಯೋಗಿಶ್ವರ್ ಮಾಡಿದ ಕೆಲ ಕೆಲಸಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರಂತೆ.ಅಮ್ಮ ಇದ್ದಗಲೂ ಅಭಿವೃದ್ಧಿ ಆಗಲಿಲ್ಲ ಅಪ್ಪ ಇದ್ದಾಗಲೂ ಅಭಿವೃದ್ಧಿ ಆಗಿಲ್ಲ ಅನ್ನೋ ವಿಚಾರಗಳನ್ನ ಕಾಂಗ್ರೆಸ್ ಅವರು ಹೆಚ್ಚು ಹೆಚ್ಚು ಪ್ರಸ್ತಾಪ ಮಾಡ್ತಿದ್ದಾರೆ ಅಲ್ಲದೇ ಬರೀ ಕುಟುಂಬದವರೇ ಬೆಳೆಯಬೇಕಾ ಸಾಮಾನ್ಯ ಕಾರ್ಯಕರ್ತರು ಬೆಳೆಯುವುದು ಬೇಡ್ವಾ ಅನ್ನೋ ಹೇಳಿಕೆಗಳನ್ನ ಪದೇ ಪದೇ ಪ್ರಸ್ತಾಪ ಮಾಡಿ ಅದರ ಎಫೆಕ್ಟ್ ನಿಖಿಲ್ ಗೆ ಆಗುವ ರೀತಿ ನೋಡಿಕೊಳ್ಳುತ್ತಿದ್ದಾರೆ.ಹೀಗಾಗಿ ನಿಖಿಲ್ ಗೆ ಇಷ್ಟವಿಲ್ಲದಿದ್ದರೂ ಅಭ್ಯರ್ಥಿ ಮಾಡಿದ ಎಚ್ಡಿ ಕುಮಾರಸ್ವಾಮಿ ಅವರೇ ನಿಖಿಲ್ ಪಾಲಿಗೆ ವಿಲನ್ ಆಗಿದ್ದಾರೆ.

ಸಿಪಿ ಯೋಗಿಶ್ವರ್ ಗೆ ಮಗಳೇ ವಿಲನ್

ಸಿಪಿ ಯೋಗಿಶ್ವರ್ ಅವರು ಕಾಂಗ್ರೆಸ್ ಸೇರಿ ಬಂಪರ್ ಹೊಡೆದರು ಅಂದುಕೊಂಡ್ರು ಅಷ್ಟು ಸುಲಭಕ್ಕೆ ಗೆಲುವು ಸಿಗುವ ಲಕ್ಷಣಗಳು ಸಿಕ್ತಿಲ್ಲ.ಸಿಪಿ ಯೋಗಿಶ್ವರ್ ಪರ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿಗಳು ಪ್ರಚಾರ ಮಾಡ್ತಿದ್ದಾರೆ. ಆದ್ರೆ ಸಿಪಿ ಯೋಗಿಶ್ವರ್ ಗೆ ಕಾಡ್ತಿರುವುದು ತಮ್ಮ ಪುತ್ರಿ ನಿಶಾ ಯೋಗಿಶ್ವರ್ ಬಗ್ಗೆ..ಚುನಾವಣೆಗೂ ಮೊದಲು ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದ ನಿಶಾ ಒಂದು ಸಮಯದಲ್ಲಿ ಬೈ ಎಲೆಕ್ಷನ್ ಲ್ಲಿ ಅಭ್ಯರ್ಥಿ ಆಗ್ತಾರೆ ಅಂತ ಚರ್ಚೆ ಆಗಿತ್ತು. ಆದ್ರೆ ಬದಲಾದ ಚನ್ನಪಟ್ಟಣ ರಾಜಕೀಯ ಪರಿಸ್ಥಿತಿಯಲ್ಲಿ ಸಿಪಿ ಯೋಗಿಶ್ವರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆ ಆಗಿ ಅಭ್ಯರ್ಥಿ ಆಗಿಬಿಟ್ರು.ಇದು ನಿಶಾ ಯೋಗಿಶ್ವರ್ ಕೋಪಕ್ಕೆ ತುಪ್ಪ ಸುರಿದಂತೆ ಆಗಿ ಈಗ ಚುನಾವಣಾ ಸಮಯದಲ್ಲಿ ಅಪ್ಪನ ವಿರುದ್ಧ ಮಾತನಾಡುವ ಕೆಲಸ ಮಾಡ್ತಿದ್ದಾರೆ.ಹೀಗಾಗಿ ಸದ್ಯಕ್ಕೆ ಸಿ.ಪಿ ಯೋಗಿಶ್ವರ್ ಗೆ ಮಗಳೇ ಬೈ ಎಲೆಕ್ಷನ್ ಲ್ಲಿ ವಿಲನ್ ಆಗಿ ಕಾಣಿಸುತ್ತಿದ್ದಾಳೆ.

ಹೀಗಾಗಿ ಕುಟುಂಬದವರಿಂದಲೇ ನೆಗೆಟಿವ್ ಇಮೇಜ್ ಶುರುವಾಗಿರುವುದರಿಂದ ನೆಗೆಟಿವ್ ಇಮೇಜ್ ನ್ನ ಪಾಸಿಟಿವ್ ಆಗಿ ಪರಿವರ್ತನೆ ಮಾಡಿಕೊಂಡವರೇ ಚುನಾವಣೆಯಲ್ಲಿ ಶುರ ಆಗೋದು ಪಕ್ಕಾ..