ತುಮಕೂರು : ಜಿಲ್ಲೆಯಲ್ಲಿ ಆಟೋ ಚಾಲಕರ ಹಾವಳಿ ಹೆಚ್ಚಾಗಿದೆ. KSRTC ಬಸ್ ಚಾಲಕನ ಮೇಲೆ ಆಟೋ ಚಾಲಕ ಕಿರಿಕ್ ಮಾಡಿದ್ದಾನೆ. ನಡುರಸ್ತೆಯಲ್ಲಿ KSRTC ಬಸ್ ತಡೆದು ಕಿರಿಕ್ ಮಾಡಿದ್ದು, ಆಟೋಗೆ ಟಚ್ ಆಗಿದೆ ಎಂದು ಆಟೋ ಚಾಲಕ ಕಿರಿಕ್ ತೆಗೆದಿದ್ದಾನೆ. ತುಮಕೂರು to ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ತಡೆದು ಕಿರಿಕ್ ಮಾಡಿದ್ದಾನೆ.

ಇದೇ ವೇಳೆ ಸಾರ್ವಜನಿಕರಿಂದ ಆಟೋ ಚಾಲಕನಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ರೊಚ್ಚಿಗೆಳುತ್ತಿದ್ದಂತೆ ಆಟೋ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ತುಮಕೂರಿನ ಎಸ್ ಪಿ ಕಚೇರಿ ಮುಂಭಾಗ ಇರುವ ಬಿಹೆಚ್ ರಸ್ತೆಯಲ್ಲಿ ನಡೆದಿದೆ.