ಕ್ರೀಡೆಗಳು

ಕನ್ನಡತಿ ನಾಯಕತ್ವದಲ್ಲಿ ಅಂಡರ್‌-19 T-20 ವಿಶ್ವಕಪ್‌ ಗೆದ್ದ ಭಾರತ

ಭಾರತ ತಂಡವನ್ನು ಈ ಬಾರಿ ಕರ್ನಾಟಕದ ನಿಕ್ಕಿ ಪ್ರಸಾದ್ ಮುನ್ನಡೆಸಿದ್ದರು.. ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತದ ವನಿತೆಯರು ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ..

ಐಸಿಸಿ ಅಂಡರ್-19 ಮಹಿಳಾ T-20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಐತಿಹಾಸಿಕ ಗೆಲುವು ದಾಖಲಿಸಿದೆ.. ಟಾಸ್ ಸೋತು ಮೊದಲು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಸೌತ್‌ ಆಫ್ರಿಕಾ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಮಾಡಿತು.. ನಂತರ ಬ್ಯಾಟಿಂಗ್‌ ಮಾಡಿದ ಭಾರತದ ವನಿತೆಯರು,, ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ.. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಜಿ. ಕಮಲಿನಿ 8 ರನ್‌ ಗಳಿಸಿ ಔಟ್‌ ಆದರು.. ನಂತರ ಬಂದ ಗೊಂಗಡಿ ತ್ರಿಷಾ (44 ರನ್), ಸಾನಿಕಾ ಚಲ್ಕೆ (26 ರನ್) ಜತೆಗೂಡಿ 11.2 ಓವರ್‌ನಲ್ಲಿ 84 ರನ್ ಪೇರಿಸಿ ಗೆಲುವಿನ ದಡ ಸೇರಿಸಿದರು.. ಭಾರತ ತಂಡವನ್ನು ಈ ಬಾರಿ  ಕರ್ನಾಟಕದ ನಿಕ್ಕಿ ಪ್ರಸಾದ್ ಮುನ್ನಡೆಸಿದ್ದರು..