ಕ್ರೀಡೆಗಳು

ಇಂದಿನಿಂದ ಭಾರತ-ಇಂಗ್ಲೆಂಡ್‌ T-20 ಸರಣಿ.. ಹೇಗಿರಲಿಗೆ ಪ್ಲೇಯಿಂಗ್-11..?

ವಿದೇಶದಲ್ಲಿ ಮಾತ್ರವಲ್ಲದೆ ತವರಿನಲ್ಲಿಯೂ ಕ್ಲೀನ್‌ಸ್ವೀಪ್‌ ಮುಖಭಂಗದ ಅವಮಾನ ಎದುರಿಸಿತ್ತು. ಇಂದಿನಿಂದ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು T-20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ T-20 ಸರಣಿ ಇಂದಿನಿಂದ ಆರಂಭವಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಇಂದು ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಇಂಗ್ಲೆಂಡ್‌ ತಂಡಕ್ಕೆ ಜೋಸ್ ಬಟ್ಲರ್ ನಾಯಕತ್ವ ವಹಿಸಲಿದ್ದಾರೆ. ಈಗಾಗಲೇ ಇಂಗ್ಲೆಂಡ್ ಇಂದಿನ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ತನ್ನ ಪ್ಲೇಯಿಂಗ್-11 ಅನ್ನು ಘೋಷಿಸಿದೆ. ಭಾರತ ಆಡುವ ಹನ್ನೊಂದರ ಬಳಗದ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಸರಣಿಯು ಭಾರತದ ಕೋಚ್ ಗೌತಮ್ ಗಂಭೀರ್ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಗಂಭೀರ್ ಗರಡಿಯಲ್ಲಿ ಭಾರತ ತಂಡವು ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಪಂದ್ಯಕ್ಕೂ ಮುನ್ನ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಕಾಳಿದೇವಿಗೆ ಗೌತಮ್‌ ಗಂಭೀರ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗೌತಮ್‌ ಗಂಭೀರ್‌ ಟೀಮ್‌ ಇಂಡಿಯಾದ ಕೋಚ್‌ ಆದಾಗ ಅವರ ಮೇಲೆ ಭಾರೀ ನಿರೀಕ್ಷೆಗಳನ್ನು ಇರಿಸಲಾಗಿತ್ತು. ಆದರೆ, ಅವರು ಕೋಚ್‌ ಆದ ಬಳಿಕ ಭಾರತ ತಂಡ ಹಲವು ಸರಣಿಗಳಲ್ಲಿ ಸೋಲು ಕಂಡಿತ್ತು. ವಿದೇಶದಲ್ಲಿ ಮಾತ್ರವಲ್ಲದೆ ತವರಿನಲ್ಲಿಯೂ ಕ್ಲೀನ್‌ಸ್ವೀಪ್‌ ಮುಖಭಂಗದ ಅವಮಾನ ಎದುರಿಸಿತ್ತು. ಇಂದಿನಿಂದ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು T-20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.