ಕೊಪ್ಪಳ - ದೊಂಬಿ ,ಗಲಭೆ ,ಜಾತಿ ಸಂಘರ್ಷ ಮಾಡಿದರೆ ನ್ಯಾಯಾಲಯ ವಿಧಿಸುವ ಕಠಿಣ ಶಿಕ್ಷೆ ತಿಳಿಯಿರಿ. ದೇಶದ ಮೊದಲ ಪ್ರಕರಣದಲ್ಲಿ 101 ಜನ ಆರೋಪಿಗಳ ತಪ್ಪು ಸಾಬೀತಾಗಿ ಐತಿಹಾಸಿಕ ತೀರ್ಪು ಹೊರಬಿದ್ದಿದೆ.
ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ನಡೆದಿದ್ದಜಾತಿ ಸಂಘರ್ಷ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ,ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ಆದೇಶ ಹೊರಡಿಸಿದೆ.
ನ್ಯಾಯಾಧೀಶ ಚಂದ್ರಶೇಖರ.ಸಿ. ಆದೇಶ ನೀಡಿದ್ದು, ಜಾತಿ ಸಂಘರ್ಷ ಪ್ರಕರಣದಲ್ಲಿ 101 ಜನರ ವಿರುದ್ಧ ತೀರ್ಪಿನ ಆದೇಶ ಬಂದ ದೇಶದ ಮೊದಲ ಪ್ರಕರಣ ಇದಾಗಿದೆ. 101ಆರೋಪಿಗಳ ವಿರುದ್ಧ ಅಕ್ಟೋಬರ್ 21 ರಂದು ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿತ್ತು.
ಮರಕುಂಬಿ ಗ್ರಾಮದಲ್ಲಿ 2014ರ ಅಕ್ಟೋಬರ್ 28 ರಂದು ಕ್ಷೌರದಂಗಡಿಗೆ ಮತ್ತು ಹೋಟೆಲ್ ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಗಲಾಟೆ ನಡೆದಿತ್ತು. ಅದೇ ದಿನ ಮತ್ತೊಂದು ಸಂದರ್ಭದಲ್ಲಿ ಕೆಲ ಸರ್ವಣಿಯರು ಸಿನಿಮಾ ನೋಡಲು ಹೋದಾಗ ದಲಿತ ಯುವಕರು ಗಲಾಟೆ ನಡೆಸಿದ್ದರು.ಇದೆರಡರ ಪರಿಣಾಮ ರಾತ್ರಿಯ ವೇಳೆಯಲ್ಲಿ ದಲಿತರ ಕೇರಿಗೆ ಸರ್ವಣೀಯರು ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು.ಅದೃಷ್ಟಕ್ಕೆ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿನ ಆರೋಪಿಗಳಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರದ್ದು ಹೆಸರು ಪುನಾರಾರ್ವತನೆಯಾಗಿದೆ.ಹೀಗಾಗಿ 101 ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನಲೆ ನ್ಯಾಯಾಲಯದಿಂದ ಶಿಕ್ಷೆಯ ಆದೇಶ ಹೊರ ಬಿದ್ದಿದೆ .