ಆಸ್ಟ್ರೇಲಿಯಾ ವಿರುದ್ದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್‌ನಲ್ಲೂ ಭಾರತದ ಕಳಪೆ ಆಟ ಮುಂದುವರೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾದ ಪೆವಿಲಿಯನ್ ಪರೇಡ್ ಮುಂದುವರೆದಿದೆ. ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ 107 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ 4 ರನ್ಗಳಿಸಿ ಪೆವಿಲಿಯನ್ ಸೇರಿದ್ರೆ, ಜೈಸ್ವಾಲ್ 10 ರನ್ಗಳಿಸಿ ಆಟ ಮುಗಿಸಿದ್ದಾರೆ. ಗಿಲ್ 20 ರನ್, ವಿರಾಟ್ ಕೊಹ್ಲಿ 17 ಗಳಿಸುವುದರಲ್ಲಿಯೇ ಸಾಕಾಗಿದ್ದಾರೆ. ಸದ್ಯ ಪಂತ್ ಹಾಗೂ ಜಡೇಜಾ ಬ್ಯಾಟಿಂಗ್ ಮಾಡ್ತಿದ್ದಾರೆ. ಸಿಡ್ನಿ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದು ಅವರ ಬದಲಾಗಿ ಶುಭಮನ್ ಗಿಲ್ ತಂಡಕ್ಕೆ ವಾಪಸಾಗಿದ್ದಾರೆ. ಗಿಲ್ ವಾಪಸ್ ಆದ್ರೂ ಜಸ್ಟ್ 20 ರನ್‌ಗೇ ಆಟ ಮುಗಿಸಿರೋದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಈಗಾಗಲೇ 2 ಟೆಸ್ಟ್ ಸರಣಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ, ಸರಣಿ ಮೇಲೆ ಕಣ್ಣಿಟ್ಟಿದೆ. ಆದ್ರೆ ಭಾರತ ಟೆಸ್ಟ್ ಸರಣಿ ಸಮಬಲ ಮಾಡಿಕೊಳ್ಳಬೇಕು ಎಂದರೆ ಈ ಪಂದ್ಯ ಗೆಲ್ಲೋದು ಅನಿವಾರ್ಯ ಇದೆ.