ಕ್ರೀಡೆಗಳು

ಆಸ್ಟ್ರೇಲಿಯಾ ಪ್ರಧಾನಿಯನ್ನು ಭೇಟಿ ಮಾಡಿದ ಟೀಂ ಇಂಡಿಯಾ ಆಟಗಾರರು

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನಾಡಲು ಆಸ್ಟ್ರೇಲಿಯಾಗೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಿದಾರೆ.

ಕ್ಯಾನ್‌ಬೆರಾ: ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನಾಡಲು ಆಸ್ಟ್ರೇಲಿಯಾಗೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಿದಾರೆ.

ಗುರುವಾರ ಕ್ಯಾನ್‌ಬೆರಾದಲ್ಲಿರುವ ಸಂಸತ್‌ ಭವನಕ್ಕೆ ಭೇಟಿ ನೀಡಿದ ಟೀಮ ಇಂಡಿಯಾ ಆಟಗಾರರು ಮತ್ತು ಆಸ್ಟ್ರೇಲಿಯಾ ಪಿಎಂ ಇಲೆವೆನ್‌ ತಂಡದ ಆಟಗಾರರು ಪ್ರಧಾನಿ ಅಲ್ಬನೀಸ್‌ ಅವರನ್ನು ಭೇಟಿಯಾದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಅವರು ಭಾರತೀಯ ತಂಡದ ಆಟಗಾರರನ್ನು ಅಲ್ಬನೀಸ್ಅವರಿಗೆ ಪರಿಚಯಿಸಿದರು.

ಟೀಂ ಇಂಡಿಯಾದ ಆಟಗಾರರ ಜತೆ ಮಾತುಕತೆ ನಡೆಸಿದ ಅಲ್ಬನೀಸ್‌ ಪರ್ತ್ಟೆಸ್ಟ್ಪಂದ್ಯದಲ್ಲಿ ಅಮೋಘ ಬೌಲಿಂಗ್ಪ್ರದರ್ಶನ ತೋರಿದ್ದ ಜಸ್ಪ್ರೀತ್ಬುಮ್ರಾ ಮತ್ತು ಶತಕ ಬಾರಿಸಿದ್ದ ವಿರಾಟ್ಕೊಹ್ಲಿಯನ್ನು ಶ್ಲಾಘಿಸಿದರು.

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಡಿಸೆಂಬರ್‌ 6 ರಿಂದ ಅಡಿಲೇಡ್ ನಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಕ್ಯಾನ್‌ಬೆರಾದಲ್ಲಿ ನವೆಂಬರ್‌ 30 ರಿಂದ ಆಸ್ಟ್ರೇಲಿಯಾ ಪಿಎಂ ಇಲೆವೆನ್‌ ತಂಡದ ವಿರುದ್ಧ 2 ದಿನಗಳ ಹೊನಲು ಬೆಳಕಿನ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನು ಆಡಲಿದೆ. ‌

ಕಳೆದ ವರ್ಷ ಭಾರತದಲ್ಲಿ ನಡೆದ ಬಾರ್ಡರ್‌-ಗವಾಸ್ಕರ್ಟೆಸ್ಟ್ಸರಣಿಯ ನಾಲ್ಕನೇ ಟೆಸ್ಟ್ಪಂದ್ಯವನ್ನು ಆಂಥೋನಿ ಅಲ್ಬನೀಸ್ ಮತ್ತು ನರೇಂದ್ರ ಮೋದಿ ಜತೆಯಾಗಿ ವೀಕ್ಷಿಸಿದ್ದರು.