ತಂತ್ರಜ್ಞಾನ

TB ಡ್ಯಾಂನಲ್ಲಿ 3 ದಿನಗಳ ಯಶ್ವಸ್ವಿ ಕಾರ್ಯಾಚರಣೆ; ಕನ್ನಯ್ಯ ಆ್ಯಂಡ್​ ಟೀಂ ಪ್ಲಾನ್ ಸಕ್ಸ​ಸ್..!

3 ದಿನದಿಂದ ಸತತ 30 ಗಂಟೆ ಕಾರ್ಯಾಚರಣೆ ನಡೆಸಿ 3 ಸ್ಟಾಪ್ ಲಾಗ್ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ. ಯತೇಚ್ಚವಾಗಿ ಹರಿದು ಹೋಗಿಗುತ್ತಿದ್ದ ಭಾರಿ ಪ್ರಮಾಣದ ಹೊರ ಹರಿವನ್ನ TB ಡ್ಯಾಂ ಅಧಿಕಾರಿಗಳು ಈಗ ಬಂದ್ ಮಾಡಿದ್ದಾರೆ.

ವಿಜಯನಗರ : ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಕೊಂಡು ಹೋಗಿ ದೊಡ್ಡ ಆತಂಕವನ್ನ ಸೃಷ್ಟಿಸಿತ್ತು. ಐತಿಹಾಸಿಕ ಜಲಾಶದ ಗೇಟ್ ಅಚಾನಕ್ಆಗಿ ಕೊಚ್ಚಿಹೋಗಿದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕೆಲವೊಂದಿಷ್ಟು ಮಂದಿ ಆಕ್ರೋಶ ಹೊರಹಾಕಿದ್ದರು. ತುಂಬಿದ್ದ ಜಲಾಶಯದ ಒಡಲು ಖಾಲಿಯಾಗುತ್ತಿದೆ. ಇದರಿಂದ ರೈತರ ಆಶಾ ಭಾವನೆಗೆ ಧಕ್ಕೆಯಾಗಿದೆ ಎಂದು ಕಿಡಿಕಾರಿದ್ರು. ಇದರ ನಡುವೆಯೂ ಡ್ಯಾಂ ರಕ್ಷಣಾ ಕಾರ್ಯ ಮುಂದುವರೆದಿದ್ದು, ಕಳೆದ 6 ದಿನಗಳಿಂದ ನೀರನ್ನ ಹೊರಬಿಟ್ಟು ಜಲಾಶಯವನ್ನ ರಕ್ಷಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಲೇ ಇತ್ತು. 

ತುಂಗಭದ್ರ ಜಲಾಶಯದಲ್ಲಿ ಬೀಡು ಬಿಟ್ಟಿದ್ದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಆ್ಯಂಡ್ ಟೀಂನ ಸತತ ಪ್ರಯತ್ನದಿಂದಾಗಿ ಕಾರ್ಯಾಚರಣೆ ಯಶಸ್ವಿಯಾಗಿದೆ. ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಮುಗಿದಿದ್ದು, ತಜ್ಞರ ಪ್ಲಾನ್ ಸಕ್ಸಸ್ ಆಗಿದೆ. 

3 ದಿನಗಳಿಂದ ಸತತ 30 ಗಂಟೆ ಕಾರ್ಯಾಚರಣೆ ನಡೆಸಿ 3 ಸ್ಟಾಪ್ ಲಾಗ್ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ. ಆ ಮೂಲಕ ಯಥೇಚ್ಛವಾಗಿ ಹರಿದು ಹೋಗುತ್ತಿದ್ದ ಭಾರಿ ಪ್ರಮಾಣದ ನೀರಿನ ಹೊರ ಹರಿವನ್ನ TB ಡ್ಯಾಂ ಅಧಿಕಾರಿಗಳು ಈಗ ಬಂದ್ ಮಾಡಿದ್ದಾರೆ.

ಟಿ.ಬಿ ಡ್ಯಾಂ ಕ್ರಸ್ಟ್ ಗೇಟ್ 19ರ ದುರಸ್ತಿ ಹಿನ್ನೆಲೆ ನಿನ್ನೆ ರಾತ್ರಿ ಮೊದಲ ಸ್ಪಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿತ್ತು. ಇಂದು ಕೂಡ ಜಲಾಶಯದಲ್ಲಿ ಎರಡು ಹಾಗೂ ಮೂರನೇ ಸ್ಟಾಪ್ ಲಾಗ್ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ. ಶನಿವಾರ  ಮಧ್ಯಾಹ್ನ 3:10ಕ್ಕೆ ಸರಿಯಾಗಿ ಮೂರನೇ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಶುರುವಾಗಿತ್ತು. ಸರಿಯಾಗಿ 26 ನಿಮಿಷಗಳಲ್ಲಿ ಮೂರನೇ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಗಿದ್ದು, ಇನ್ನೂ ಎರಡು ಸ್ಟಾಪ್ ಲಾಗ್ಗಳನ್ನ ಅಳವಡಿಸುವುದು ಬಾಕಿ ಇದೆ. ಇದು ಕೂಡ ಇಂದು ಸಂಜೆಯೊಳಗೆ ಮುಗಿಯಲಿದೆ. ಯಶಸ್ವಿಯಾಗಿ ಮೂರು ಸ್ಟಾಪ್ ಲಾಗ್ ಅಳವಡಿಕೆ ಮಾಡಿ, ಆತಂಕವನ್ನ ದೂರ ಮಾಡಿದ ಕನ್ನಯ್ಯ ನಾಯ್ಡು ಆ್ಯಂಡ್ ಟೀಂಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ.