ಸ್ಪೆಷಲ್ ಸ್ಟೋರಿ

ಇನ್ಮುಂದೆ ಶುರುವಾಯ್ತು iPhone 16 ಹವಾ; ರಿಲೀಸ್​ಗೆ ಕೌಂಟ್​ಡೌನ್..! ಸ್ಪೆಷಲ್​ ಫೀಚರ್ಸ್​ ಏನಿರಲಿದೆ?

ಗುಡ್​ನ್ಯೂಸ್​ ನೀಡಿದ ಆ್ಯಪಲ್ ಕಂಪನಿ, ಸ್ಮಾರ್ಟ್​ಫೋನ್ ಮಾರ್ಕೆಟ್​ಗೆ ಕಾಲಿಡ್ತಿದ್ದಾನೆ ದೈತ್ಯ ಐಫೋನ್ 16.

ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಕ್ಷೇತ್ರದಲ್ಲಿ ದೊಡ್ಡಮಟ್ಟದ ಪ್ರಭುತ್ವ ಸಾಧಿಸಿರೋ ಆ್ಯಪಲ್ ಕಂಪನಿ ಈಗ ಮತ್ತೊಂದು ಗುಡ್ನ್ಯೂಸ್ ನೀಡೋಕೆ ರೆಡಿಯಾಗಿದೆ. ಇಷ್ಟುದಿನ iPhone 15 ಜೊತೆ ಕನ್ನಡಿಯ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಬೋರ್ ಆಗಿರುವವರಿಗೆ ಆ್ಯಪಲ್ ಕಂಪನಿ ಗುಡ್ನ್ಯೂಸ್ ನೀಡಿದೆ. ಹೊಸ ಐಫೋನ್ 16 ಸೀರೀಸ್ ರಿಲೀಸ್ ಮಾಡಲು ಐಫೋನ್ ಕಂಪನಿ ಸಜ್ಜಾಗಿದೆ. ಹೌದು, ಐಫೋನ್ ಪ್ರಿಯರಿಗೆ ಬಿಗ್ ಅಪ್ಡೇಟ್ ನೀಡಿರುವ ಆ್ಯಪಲ್ ಕಂಪನಿ ಸೆಪ್ಟೆಂಬರ್ 10ನೇ ತಾರೀಕು iPhone16 ಲಾಂಚ್ ಮಾಡ್ತಿದೆ ಎಂದು ಹೇಳಲಾಗ್ತಿದೆ. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಆ್ಯಪಲ್ ನಾಲ್ಕು ರೂಪಾಂತರಗಳಲ್ಲಿ ಲಾಂಚ್ ಆಗಲಿದೆ. iPhone 16, iPhone 16 Plus, iPhone 16 Pro ಮತ್ತು iPhone 16 Pro Max ಏಕಕಾಲಕ್ಕೆ ಮಾರುಕಟ್ಟೆಯಲ್ಲಿ ರಿಲೀಸ್ ಮಾಡಲಾಗುತ್ತದೆ.

ಎಷ್ಟಿರಲಿದೆ iPhone 16 ಬೆಲೆ?
ಐಫೋನ್ ಖರೀದಿಸುವುದು ಅಂದ್ರೆ ಸಾಮಾನ್ಯ ಫೋನ್ಗಳನ್ನ ಖರೀದಿಸಿದಷ್ಟು ಸುಲಭವಲ್ಲ. ಭಾರಿ ಮೊತ್ತದ ದುಬಾರಿ ಐಫೋನ್ ಕೊಳ್ಳಲು ಜನ ಕೊಂಚ ಹಿಂದೆ ಮುಂದೆ ನೋಡೋದುಂಟು. ಆದ್ರೂ ಕೂಡ ಐಫೋನ್ ಪ್ರಿಯರು ಒಂದು ಹೆಜ್ಜೆ ಮುಂದೆ ಇಟ್ಟು ತಮ್ಮ ನೆಚ್ಚಿನ ಫೋನ್ ಕೊಳ್ತಾರೆ. ಸದ್ಯದ ಮಾಹಿತಿ ಪ್ರಕಾರ iPhone 16  ಬೇಸ್ ಪ್ರೈಸ್ 80 ಸಾವಿರ ಇರಲಿದೆ. ಈ ಬಾರಿ ಐಫೋನ್‌ನಲ್ಲಿ ಸ್ವಲ್ಪ ಹೆಚ್ಚಿನ ಅಪ್‌ಗ್ರೇಡ್‌ಮಾಡಲಾಗಿದ್ದು, ಗ್ರಾಹಕರಿಗೆ ಐಫೋನ್ ರೇಟ್ ಕೊಂಚ ಕೈ ಸುಡಲಿದೆ.

iPhone 16ನಲ್ಲಿರುವ ಫೀಚರ್ಸ್ಗಳೇನು?
ಆ್ಯಪಲ್‌ಪ್ರೊ ಮೊಬೈಲ್‌ ಡಿಸ್‌ಪ್ಲೇ 6.3 ಇಂಚು ಇರಲಿದ್ದು, ಡಿಸ್‌ಪ್ಲೇ ಗಾತ್ರ 6.9 ಇರಲಿದೆ. ಹೊಸ ಐಫೋನ್‌ ಡಿಸ್‌ಪ್ಲೇ ಹಳೆಯ ಐಫೋನ್‌ನಂತೆಯೇ ಇರಲಿದ್ದು, ಇದರ ಡಿಸೈನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಐಫೋನ್‌16 ಪ್ರೋಗಾಗಿ ಹೊಸ A ಸಿರೀಸ್ ಚಿಪ್‌ಗಳನ್ನು ಡಿಸೈನ್ ಮಾಡಲಾಗಿದೆ. ಇದರಲ್ಲಿ  AI ಫೀಚರ್ಸ್‌‌ಗಳು ಕೂಡ ಇರಲಿವೆ.

ಎಷ್ಟು ಬ್ಯಾಟರಿ ಕ್ಯಾಪಸಿಟಿ ಹೊಂದಿದೆ  iPhone 16?
ಐಫೋನ್‌mAh, ಐಫೋನ್‌ಪ್ಲಸ್‌mAh, ಐಫೋನ್‌ಪ್ರೊ 3355mAh ಮತ್ತು  iPhone 16 ಪ್ರೊ ಮ್ಯಾಕ್ಸ್‌mAh ಬ್ಯಾಟರಿ ಕ್ಯಾಪಸಿಟಿಯನ್ನ ಹೊಂದಿದೆ. ಬಳಕೆದಾರರಿಗೆ ಕ್ಯಾಪ್ಚರ್‌ಬಟನ್‌ ನೀಡಲು ಆಪಲ್‌ ನಿರ್ಧರಿಸಿದ್ದು, ಇದರಿಂದ ಸುಲಭವಾಗಿ ಅತ್ಯುತ್ತಮ ಕ್ವಾಲಿಟಿಯ ಫೋಟೋ, ವಿಡಿಯೋಗಳನ್ನು ಶೂಟ್‌ಮಾಡಬಹುದು.