ಸ್ವಿಡನ್‌ನಲ್ಲಿ ಕುರಾನ್ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ್ದ ಇರಾಕ್ ನಿರಾಶ್ರಿತ ಸಲ್ವಾನ್ ಮೊಮಿಕಾ ಅವರನ್ನು ಗುಂಡಕ್ಕಿ ಕೊಲ್ಲಲಾಗಿದೆ.. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಐದು ವ್ಯಕ್ತಿಗಳನ್ನು ಬಂಧಿಸಿದ್ದಾರೆ.. 2023ರಲ್ಲಿ ಪ್ರತಿಭಟನೆ ವೇಳೆ ಸಲ್ವಾನ್ ಮೊಮಿಕಾ ಪದೇಪದೇ ಕುರಾನ್ ಸುಟ್ಟುಹಾಕಿ ಮುಸ್ಲಿಂ ದೇಶಗಳ ವಿರೋಧವನ್ನ ಕಟ್ಟಿಕೊಂಡಿದ್ದರು.. ಇದಾದ ನಂತರ ಜನಾಂಗೀಯ ಸಮುದಾಯಗಳ ವಿರುದ್ಧ ಪ್ರಚೋದನೆ ಮಾಡಿದ ಆರೋಪದ ಮೇಲೆ ಸ್ವಿಡನ್ ಅಧಿಕಾರಿಗಳಿಂದ ಸಲ್ವಾನ್ ಮೊಮಿಕಾ ತನಿಖೆಗೆ ಒಳಗಾಗಿದ್ದ.. ಈ ಪ್ರಕರಣದಲ್ಲಿ ಈತ ತಪ್ಪಿತಸ್ಥನೇ..? ಅಲ್ಲವೇ ಎಂಬುದನ್ನು ಸ್ಟಾಕ್‌ಹೋಮ್ ನ್ಯಾಯಾಲಯ ತೀರ್ಪು ನೀಡಬೇಕಿತ್ತು.. ಆದರೆ ಪ್ರತಿವಾದಿಗಳಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಕೋರ್ಟ್ ತೀರ್ಪನ್ನು ಮುಂದೂಡಿತ್ತು.. ಇದೇ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದು ಸಲ್ವಾನ್ ಮೊಮಿಕಾ ಹತ್ಯೆಯಾಗಿದೆ.. ತನ್ನ ಪ್ರತಿಭಟನೆಗಳು ಇಸ್ಲಾಂ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧವಲ್ಲ, ಕುರಾನ್‌ನಲ್ಲಿರುವ ಸಂದೇಶಗಳಿಂದ ಜನರನ್ನ ರಕ್ಷಿಸುವುದೇ ನನ್ನ ಮೂಲ ಉದ್ದೇಶ ಎಂದು ಹೇಳಿಕೊಂಡಿದ್ದ..