ಕರ್ನಾಟಕ

ಬಳ್ಳಾರಿ ಜೈಲಿನಲ್ಲಿ ಟಾಯ್ಲೆಟ್ ಕ್ಲೀನ್ ಮಾಡ್ತಿದ್ದಾರಾ ದರ್ಶನ್..?

ಜೈಲುಹಕ್ಕಿ ದರ್ಶನ್ ಗೆ ಆಳು-ಕಾಳು ಅಂತಾ ಬಿಂದಾಸ್ ಆಗಿದ್ರು. ಆದರೆ ಈಗ ಜೈಲುಹಕ್ಕಿಯಾಗಿ ಮೈ ಮೇಲೆ ಬರೆ ಎಳೆದುಕೊಳ್ಳುವಂತಾಗಿದೆ. ಆಳು-ಕಾಳಿರಲಿ ಒಳ್ಳೆ ಊಟ, ನೆಮ್ಮದಿಯ ನಿದ್ರೆಯೂ ಇಲ್ಲದಂತಾಗಿದೆ. ಟೈಮ್ ಕೆಟ್ಟರೆ ಅರಸ ಕೂಡ ಆಳಾಗಬಲ್ಲ ಅನ್ನೋದಕ್ಕೆ ದರ್ಶನ್ ಒಳ್ಳೆಯ ಉದಾಹರಣೆಯಾಗಿದ್ದಾರೆ.

ಕೈಗೊಬ್ಬ ಕಾಲಿಗೊಬ್ಬ ಆಳು-ಕಾಳುಗಳ ನಡುವೆ ಬಿಂದಾಸ್ ಜೀವನ ಸಾಗಿಸಿದ್ದ ದರ್ಶನ್ ಸ್ಥಿತಿ, ಎಂಥವರಿಗೂ ಬೇಡ ಎನ್ನುವಂತಾಗಿದೆ. ಯಾಕಂದ್ರೆ ಕೋಟಿ ಕೋಟಿ ಕೊಳಿತಾ ಇದ್ರೂ ನಟ ದರ್ಶನ್ ಗೆ ಒಳ್ಳೆ ಊಟ ಇಲ್ಲ.. ನೆಮ್ಮದಿಯ ನಿದ್ರೆ ಇಲ್ಲ. ಬೇಕೆನಿಸಿದ ಶೋಕಿ ಜೀವನ ಎಲ್ಲವೂ ದೂರ ದೂರ. ಜೈಲುವಾಸದಲ್ಲಿ ದಾಸನ ಪರಿಸ್ಥಿತಿ ಹೇಗಿದೆ ಅಂದರೆ, ಟಾಯ್ಲೆಟ್ ಕ್ಲೀನ್ ಮಾಡುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ, ಕೊಲೆ ಆರೋಪಿ ದರ್ಶನ್ ಪಾಲಿಗೆ ಜೈಲುವಾಸ ಅಕ್ಷರಶಃ ನರಕಯಾತನೆಯಾಗಿದೆ. ಪ್ರತಿದಿನ ತಾನು ಉಳಿದಿರುವ ಕೊಠಡಿಯನ್ನು ತಾನೇ ಸ್ಚಚ್ಛ ಮಾಡಿಕೊಳ್ಳುತ್ತಿದ್ದಾರಂತೆ. ಪೊರಕೆ ಹಿಡಿದು ಕಸ ಗುಡಿಸುವುದಲ್ಲದೇ ಬಟ್ಟೆ ಒಗೆದುಕೊಳ್ಳುವುದು, ಶೌಚಾಲಯ ಕ್ಲೀನ್ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ.

ಕಳೆದ 16 ದಿನಗಳಿಂದ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದಾರೆ. ಜೈಲಿನ ನಿಯಮಗಳ ಪ್ರಕಾರ ವಾರಕ್ಕೊಮ್ಮೆ ಮಾತ್ರ ಸಿಬ್ಬಂದಿ ಬಂದು, ಶೌಚಾಲಯ ಕ್ಲೀನ್ ಮಾಡುತ್ತಾರೆ. ಹೀಗಾಗಿ ಉಳಿದ ದಿನಗಳಲ್ಲಿ ಈ ಕೆಲಸವನ್ನೂ ದರ್ಶನ್ ಅವರೇ ಮಾಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.