ವಿದೇಶ

ಸಿರಿಯಾ ಯುದ್ಧ ಕಣಕ್ಕೆ ಇಸ್ರೇಲ್‌ ಸೇನೆ ಎಂಟ್ರಿ… ಸೇನಾ ನೆಲೆಗಳ ಮೇಲೆ ದಾಳಿ

ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಬಂಡುಕೋರ ಪಡೆಗಳು ಸಿರಿಯಾ ರಾಜಧಾನಿ ಡಮಾಸ್ಕಸ್‌ ನಗರವನ್ನು ವಶಕ್ಕೆ ಪಡೆದ ನಂತರ ಇಸ್ರೇಲ್ ಸೇನಾ ಪಡೆಗಳು ಡಮಾಸ್ಕಸ್ ಬಳಿ ವಾಯು ದಾಳಿ ನಡೆಸಿವೆ.

ಡಮಾಸ್ಕಸ್‌: ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಬಂಡುಕೋರ ಪಡೆಗಳು ಸಿರಿಯಾ ರಾಜಧಾನಿ ಡಮಾಸ್ಕಸ್ನಗರವನ್ನು ವಶಕ್ಕೆ ಪಡೆದ ನಂತರ ಇಸ್ರೇಲ್ ಸೇನಾ ಪಡೆಗಳು ಡಮಾಸ್ಕಸ್ ಬಳಿ ವಾಯು ದಾಳಿ ನಡೆಸಿವೆ.

ಬಂಡುಕೋರ ಪಡೆಗಳು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ನಂತರ, ಇಸ್ರೇಲ್ ಗಡಿಯಾದ ಗೋಲನ್ ಹೈಟ್ಸ್ ಪಕ್ಕದಲ್ಲಿರುವ ನೈಋತ್ಯ ಸಿರಿಯಾದಲ್ಲಿನ ಸೇನಾರಹಿತ ಬಫರ್ ವಲಯಕ್ಕೆ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಇಸ್ರೇಲ್‌ ಸೇನೆ ನೆರವು ನೀಡಲು ಧಾವಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ ಸೇನೆ ಡಮಾಸ್ಕಸ್‌ ಬಳಿಯ ವಾಯು ರಕ್ಷಣಾ ನೆಲೆಗಳು ಮತ್ತು ಯುದ್ಧಸಾಮಗ್ರಿ ಡಿಪೋಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇಸ್ಲಾಮಿಸ್ಟ್ ನೇತೃತ್ವದ ಬಂಡುಕೋರರು ಸಿರಿಯಾವನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿದ್ದಂತೆ, ಅವರ ದಾಳಿಯನ್ನು ಹಿಮ್ಮೆಟ್ಟಿಸಲು ಶಾಂತಿಪಾಲಕರಿಗೆ ಸಹಾಯ ಮಾಡಲು ಯುಎನ್ ಗಸ್ತು ಬಫರ್ ವಲಯಕ್ಕೆ ತನ್ನ ಸೈನಿಕರು ಪ್ರವೇಶಿಸಿದ್ದಾರೆ ಎಂದು ಇಸ್ರೇಲ್ ಈಗಾಗಲೇ ಘೋಷಿಸಿತ್ತು.

ಇನ್ನು ಇಸ್ರೆಲ್ ದಾಳಿಯ ವೇಳೆ ಸಿರಿಯನ್ ಬಂಡುಕೋರ ಪಡೆಗಳು ಡಮಾಸ್ಕಸ್ನಲ್ಲಿ ಸ್ಥಳೀಯ ಸಮಯ ಸಂಜೆ 4 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಘೋಷಿಸಿವೆ. ಆದರೆ ಇಸ್ರೇಲಿ ಪಡೆಗಳುಬಫರ್ ವಲಯವನ್ನು ಸಂರಕ್ಷಿಸಲು ಮತ್ತು ಇಸ್ರೇಲ್ ಅನ್ನು ರಕ್ಷಿಸಲು ಅಗತ್ಯವಿರುವವರೆಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆಎಂದು ಹೇಳಿಕೆ ನೀಡಿದೆ. ಆದರೆ ಇಸ್ರೇಲಿ ಮಿಲಿಟರಿಸಿರಿಯಾದಲ್ಲಿನ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.