ವಿದೇಶ

ಹಮಾಸ್‌ ಮಾಜಿ ಮುಖ್ಯಸ್ಥ ಹನಿಯೆಹ್‌ ಹತ್ಯೆ ಹೊಣೆ ಹೊತ್ತ ಇಸ್ರೇಲ್‌

ಹಮಾಸ್‌ನ ಮಾಜಿ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ನನ್ನು ಕೆಲವು ತಿಂಗಳ ಹಿಂದೆ ಇರಾನ್‌ ನಲ್ಲಿ ಹತ್ಯೆ ಮಾಡಲಾಗಿತ್ತು. ಹಮಾಸ್‌ ಮಾಜಿ ಮುಖ್ಯಸ್ಥನ ಹತ್ಯೆ ಮಾಡಿದ್ದು ತಾವೇ ಎಂದು ಇಸ್ರೇಲ್‌ ಈಗ ಒಪ್ಪಿಕೊಂಡಿದೆ.

ಟೆಲ್‌ ಅವೀವ್‌: ಹಮಾಸ್‌ನ ಮಾಜಿ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ನನ್ನು ಕೆಲವು ತಿಂಗಳ ಹಿಂದೆ ಇರಾನ್‌ ನಲ್ಲಿ ಹತ್ಯೆ ಮಾಡಲಾಗಿತ್ತು. ಹಮಾಸ್‌ ಮಾಜಿ ಮುಖ್ಯಸ್ಥನ ಹತ್ಯೆ ಮಾಡಿದ್ದು ತಾವೇ ಎಂದು ಇಸ್ರೇಲ್‌ ಈಗ ಒಪ್ಪಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಜುಲೈನಲ್ಲಿ ಇರಾನ್ನಲ್ಲಿ, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ನನ್ನು ಇಸ್ರೇಲ್‌ ಹತ್ಯೆ ಮಾಡಿತ್ತು. ಈಗ ಯೆಮೆನ್‌ ನಲ್ಲಿರುವ ಹೌತಿ ಬಂಡುಕೋರರಿಗೂ ಇದೇ ಗತಿ ಆಗಲಿದೆ. ನಾವು  ಹೌತಿಗಳ ಮೇಲೆ ಬಲವಾಗಿ ದಾಳಿ ನಡೆಸಲಿದ್ದೇವೆ ಮತ್ತು ನಾವು ಟೆಹ್ರಾನ್, ಗಾಜಾ ಮತ್ತು ಲೆಬನಾನ್ನಲ್ಲಿ ಹನಿಯೆಹ್‌, ಸಿನ್ವಾರ್ ಮತ್ತು ನಸ್ರಲ್ಲಾನ ಹತ್ಯೆ ಮಾಡಿದಂತೆ ಯೆಮೆನ್‌ ನ ಹೊಡೆದಾಹ್ಮತ್ತು ಸನಾದಲ್ಲಿ ಹೌತಿ ನಾಯಕರ ಹತ್ಯೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜುಲೈ 31 ರಂದು ಟೆಹ್ರಾನ್ ಅತಿಥಿಗೃಹದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹನಿಯೆಹ್ ಕೊಲ್ಲಲ್ಪಟ್ಟಿದ್ದ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ ಆತನ ಹತ್ಯೆ ಮಾಡಲಾಗಿತ್ತು. ಹನಿಯೆಹ್‌ ಹತ್ಯೆ ಬಳಿಕ ಗಾಜಾದಲ್ಲಿ ಆತನ ಉತ್ತರಾಧಿಕಾರಿ ಯಾಹ್ಯಾ ಸಿನ್ವಾರ್‌ ನನ್ನೂ ಹತ್ಯೆ ಮಾಡಲಾಗಿತ್ತು.