ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಹಲವು ಅಧ್ಯಯನಗಳು ನಡೆಯಲಿವೆ. ಈ ಅಧ್ಯಯನಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ 20 ಹಣ್ಣಿನ ನೊಣಗಳಿರುವ ಕಿಟ್ ಆಯ್ಕೆಯಾಗಿದೆ. ದೇಶದ ಎಲ್ಲ 75 ಕೃಷಿ ವಿವಿಗಳು ನೀಡಿದ ವಿವಿಧ ಮಾದರಿಗಳ ಪೈಕಿ ಧಾರವಾಡದ ಕೃಷಿ ವಿವಿಯ ಜೈವಿಕಶಾಸ್ತ್ರ ವಿಭಾಗದ ಈ ಕಿಟ್ ಆಯ್ಕೆಯಾಗಿದೆ. ದೇಶದಲ್ಲಿಯೇ ಈ ಸಂಶೋಧನೆ ಮಾಡಿದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಧಾರವಾಡ ಕೃಷಿ ವಿವಿಗೆ ಸಿಕ್ಕಿದೆ. ಹಣ್ಣಿನ ನೊಣಗಳು ಮಾನವನ ದೇಹ ರಚನೆಯನ್ನು ಹೋಲುತ್ತವೆ. ಹೀಗಾಗಿ ಶೂನ್ಯ ಗುರುತ್ವದಲ್ಲಿ ಬಾಹ್ಯಾಕಾಶದಲ್ಲಿ ನೌಕೆ ಸುತ್ತುವಾಗ ನೊಣಗಳ ದೈಹಿಕ ರಚನೆಯಲ್ಲಾಗುವ ಬದಲಾವಣೆಗಳು ಇಸ್ರೋಗೆ ಮಹತ್ವದ ಮಾಹಿತಿ ನೀಡದೆ ಇದರಿಂದ ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ಈ ಸಂಶೊಧನೆ ನೆರವಾಗಲಿದೆ.