ಮಂಡ್ಯ : ಚಂದ್ರಶೇಖರ ಸ್ವಾಮಿ ವಿರುದ್ದ FIR ವಿಚಾರವಾಗಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಮಾತನಾಡಿದ್ದಾರೆ. ಚಂದ್ರಶೇಖರ ಸ್ವಾಮಿ ವಿರುದ್ದ FIR ಆಗಿರೋದು ಬೇಸರದ ಸಂಗತಿಯಾಗಿದೆ. ಎಲ್ಲಾ ವಿಚಾರದಲ್ಲೂ ರಾಜಕೀಯ ಸರಿಯಲ್ಲ. ಎಕ್ಸ್ಟ್ರೀಮ್ ಲೆವೆಲ್ಗೆ ರಾಜಕೀಯ ಹೋಗ್ತಿರೋದು ಭಯ ಆಗುತ್ತೆ. ವಾಕ್ ಸ್ವಾತಂತ್ರ್ಯವೆ ಇಲ್ವಾ ಅನ್ನುವ ರೀತಿ ಆಗ್ತಿದೆ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇಲ್ವಾ ಅನ್ನೊ ಭಯ ಆಗ್ತಿದೆ. ಖುದ್ದಾಗಿ ಸ್ವಾಮಿಜಿಯೇ ಅವರ ಮಾತು ಸರಿ ಇಲ್ಲಾ ಅಂದಾಗ ಅದನ್ನ ಮುಂದುವರೆಸೋದು ಸರಿಯಲ್ಲಾಎಂದು ಹೇಳಿದರು.