ಬೆಳಗಾವಿ: ಕೊಲೆ ಕೇಸ್ ಅಲ್ಲಿ ಜೈಲು ಸೇರಿರೊ ದರ್ಶನ್ ಅಂಡ್ ಗ್ಯಾಂಗ್ಗೆ ಪ್ರತಿ ದಿನವು ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಿದೆ. ಅದರಲ್ಲೂ ಬೆಳಗಾವಿ ಹಿಂಡಲಗಾ ಜೈಲಾಧಿಕಾರಿಗಳು ವಿಲ್ಸನ್ ಗಾರ್ಡನ್ ನಾಗಾ ಆಂಡ್ ಸಹಚರರಿಗೆ ನರಕಯಾತನೆಯನ್ನ ತೊರಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಸಂಜೆ ಹಿಂಡಲಗಾ ಜೈಲಿಗೆ ವಿಲ್ಸನ್ ಗಾರ್ಡನ್ ನಾಗಾ ಅಂಡ್ ಗ್ಯಾಂಗ್ನ ಶಿಫ್ಟ್ ಮಾಡಲಾಗಿತ್ತು. ಈ ಜೈಲಿನ ಅಂದೇರಿ ಸೆಲ್ನಲ್ಲಿ ಒಂಟಿಯಾಗಿ ಯಾರೊಂದಿಗೂ ಮಾತನಾಡದೆ, ನಾಲ್ಕು ರಾತ್ರಿ ಕಳೆದಿದ್ದಾನೆ, ಇನ್ನು ಅಚ್ಚರಿಯ ವಿಷಯ ಏನೆಂದರೆ ಈ ಸೆಲ್ನಲ್ಲಿ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ ಸೇರಿ ನಠೋರಿಯಸ್ ಕೈದಿಗಳು ಇದ್ದಾರೆ.
ಯಾರೊಂದಿಗು ಮಾತನಾಡದೆ, ಯಾವುದೇ ಐಶಾರಾಮಿ ಸೌಲಭ್ಯವಿಲ್ಲದೆ, ಅಲ್ಲಿನ ಫುಡ್ ಮೆನ್ಯೂಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಾಗಾ ಅಂಡ್ ಗ್ಯಾಂಗ್ ಐಶಾರಾಮಿ ಸೌಲಭ್ಯಗಳನ್ನ ಅನುಭವಿಸುತ್ತಿದ್ದರು. ಆದರೆ ಈಗ ಬೆಳಗಾವಿ ಜೈಲಿನಲ್ಲಿ ಪರಪ್ಪನ ಅಗ್ರಹಾರದಿಂದ ಬಂದಿರೋ ಕೈದಿಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ ಜೈಲಾಧಿಕಾರಿಗಳು.
ಜೊತೆಗೆ ನಾಗಾ ಆಂಡ್ ಸಹಚರರಿಗೆ ಹಿಂಡಲಗಾ ಜೈಲಾಧಿಕಾರಿಗಳು ಕೈದಿ ಸಂಖ್ಯೆ ನೀಡಿದ್ದಾರೆ.
1. ವಿಲ್ಸನ್ ಗಾರ್ಡನ್ ನಾಗಾಗೆ ಕೈದಿ ಸಂಖ್ಯೆ 2980
2. ಸಹಚರ ಗ್ರೇಸ್ ಬಾಲ್ಟರ್ ಗೆ ಕೈದಿ ಸಂಖ್ಯೆ 2981
3. ಸಹಚರ ವೇಲುಗೆ ಕೈದಿ ಸಂಖ್ಯೆ 2982
4. ಸಹಚರ ಮನೋಹರಗೆ ಕೈದಿ ಸಂಖ್ಯೆ 2983