ಕ್ರೀಡೆಗಳು

ಪಿಂಕ್‌ ಬಾಲ್‌ ಟೆಸ್ಟ್‌ ನಲ್ಲಿ ದಾಖಲೆ ಬರೆಯಲು ಸಿದ್ಧರಾದ ಕೊಹ್ಲಿ, ಬುಮ್ರಾ

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ 2 ನೇ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ಜಸ್ಪ್ರೀತ್‌ ಬುಮ್ರಾ ದಾಖಲೆ ಬರೆಯೋದಕ್ಕೆ ರೆಡಿಯಾಗಿದಾರೆ.

ಅಡಿಲೇಡ್‌: ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ 2 ನೇ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ಜಸ್ಪ್ರೀತ್‌ ಬುಮ್ರಾ ದಾಖಲೆ ಬರೆಯೋದಕ್ಕೆ ರೆಡಿಯಾಗಿದಾರೆ.

ಡಿಸೆಂಬರ್‌ 6 ರಿಂದ ಅಡಿಲೇಡ್‌ ನಲ್ಲಿ ಎರಡನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಹೊನಲು ಬೆಳಕಿನ ಈ ಪಂದ್ಯದಲ್ಲಿ ಜಸ್ಪ್ರೀತ್‌ ಬುಮ್ರಾ ತಮ್ಮ ವಿಕೆಟ್‌ ಬೇಟೆ ಮುಂದುವರೆಸಲು ರೆಡಿಯಾಗಿದಾರೆ. ಪರ್ತ್‌ ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ಬುಮ್ರಾ ಅಡಿಲೇಡ್‌ ಟೆಸ್ಟ್‌ ನಲ್ಲಿ 1 ವಿಕೆಟ್‌ ಪಡೆದರೆ ಈ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ 50 ವಿಕೆಟ್‌ ಪಡೆದ ಮೊದಲ ಬೌಲರ್‌ ಎನಿಸಿಕೊಳ್ಳಲಿದ್ದಾರೆ. ಇನ್ನು ಆರ್‌ ಅಶ್ವಿನ್‌ 46 ವಿಕೆಟ್‌ ಪಡೆದು ಎರಡನೇ ಸ್ಥಾನದಲ್ಲಿದಾರೆ. ಇನ್ನು  ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ವಿಕೆಟ್ಪಡೆದವರ ಸಾಲಿನಲ್ಲಿ ಆಸ್ಟ್ರೇಲಿಯಾದ ಶೇನ್ವಾರ್ನ್ಮತ್ತು ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ಅಗ್ರ ಸ್ಥಾನಗಳಲ್ಲಿ ಇದ್ದಾರೆ. ವಾರ್ನ್‌, 2005ರಲ್ಲಿ ಕೇವಲ 15 ಪಂದ್ಯಗಳ 30 ಇನಿಂಗ್ಸ್ಗಳಲ್ಲಿ 96 ವಿಕೆಟ್ಗಳನ್ನು ಪಡೆದಿದ್ದರು. ಮುರುಳೀಧರನ್‌ 2006ರಲ್ಲಿ 11 ಪಂದ್ಯಗಳ 21 ಇನಿಂಗ್ಸ್ಗಳಲ್ಲಿ 90 ವಿಕೆಟ್ಕಿತ್ತಿದ್ದರು.

ಪರ್ತ್‌ ನಲ್ಲಿ ಭರ್ಜರಿ ಶತಕ ಸಿಡಿಸಿರುವ ವಿರಾಟ್‌ ಕೊಹ್ಲಿ ಅಡಿಲೇಸ್‌ ನಲ್ಲಿ 102 ರನ್‌ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. 1993-2005 ನಡುವೆ ಅಡಿಲೇಡ್ನಲ್ಲಿ 8 ಟೆಸ್ಟ್ ಇನಿಂಗ್ಸ್ ಆಡಿರುವ ಲಾರಾ 610 ರನ್ ಕಲೆಹಾಕಿದ್ದಾರೆ.

ಅಡಿಲೇಡ್ನಲ್ಲಿ ಈಗಾಗಲೇ 3 ಟೆಸ್ಟ್ ಸೆಂಚುರಿ ಸಿಡಿಸಿರುವ ವಿರಾಟ್ ಕೊಹ್ಲಿ, ಪಿಂಕ್ ಬಾಲ್ ಟೆಸ್ಟ್ನಲ್ಲಿ ಸೆಂಚುರಿ ಸಿಡಿಸಿದರೆ ಓವಲ್ ಮೈದಾನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ದಾಖಲೆಯ ಬರೆಯಲಿದ್ದಾರೆ.