ತಾಯಿ ಹಾಸನಾಂಬೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿ ಎಂದು ಕೇಳಿಕೊಂಡಿದ್ದೇವೆ ಎಂದು, ಜೆಡಿಎಸ್ ಎಂಎಲ್ಸಿ ಬೋಜೇಗೌಡ ಹೇಳಿಕೆ ನೀಡಿದ್ದಾರೆ. ಹಾಸನದ ಹಾಸನಾಂಬೆ ದೇಗುಲದಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಸೋತ ನಂತರ ಚನ್ನಪಟ್ಟಣದ ಜನರ ಜೊತೆ ಹತ್ತಿರದಲ್ಲಿ ಇದ್ದಾರೆ. ಯೋಗೇಶ್ವರ್ ಅವರಿಗೆ ನಮ್ಮ ಪಕ್ಷದಿಂದ ನಿಲ್ಲಲಿ ಅಂತ ಹೇಳಿದ್ದೆವು. ಕೊನೆಗೆ ಬಿಜೆಪಿ ಚಿಹ್ನೆಯಿಂದ ನಿಲ್ಲಲಿ ಅಂತಲೂ ಹೇಳಿದ್ದೆವು. ಅದ್ರೆ ಯೋಗೇಶ್ವರ್ ದ್ರೋಹ ಮಾಡಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಎಲ್ಲ ಪಕ್ಷದಲ್ಲಿ ಕಳ್ಳರು ಇದ್ದಾರೆ, ಅದ್ರೆ ಕಾರ್ಯಕರ್ತರಲ್ಲಿ ಕಳ್ಳರಿಲ್ಲ. ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.